ಥೈಲ್ಯಾಂಡ್ ಭೂಕಂಪ: ಮೃತರ ಸಂಖ್ಯೆ 6ಕ್ಕೆ ಏರಿಕೆ
Update: 2025-03-29 20:32 IST

PC: PTI
ಬ್ಯಾಂಕಾಕ್: ಮ್ಯಾನ್ಮಾರ್ ನ ನೆರೆಯ ದೇಶ ಥೈಲ್ಯಾಂಡ್ ನಲ್ಲೂ ಶುಕ್ರವಾರ ಸಂಭವಿಸಿದ ತೀವ್ರ ಭೂಕಂಪದಲ್ಲಿ ಮೃತರ ಸಂಖ್ಯೆ 6ಕ್ಕೆ ಹೆಚ್ಚಿದ್ದು 26 ಮಂದಿ ಗಾಯಗೊಂಡಿದ್ದಾರೆ. 47 ಮಂದಿ ನಾಪತ್ತೆಯಾಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಗ್ರೇಟರ್ ಬ್ಯಾಂಕಾಕ್ ಪ್ರದೇಶದಲ್ಲಿ ಭೂಕಂಪದಿAದ ಹೆಚ್ಚಿನ ಹಾನಿ ಸಂಭವಿಸಿದೆ. ಸರಕಾರದ ಕಚೇರಿಗಳಿರುವ, ಚೀನಾ ಸಂಸ್ಥೆ ನಿರ್ಮಿಸಿರುವ 33 ಅಂತಸ್ತಿನ ಕಟ್ಟಡವು ನೆಲಸಮಗೊಂಡಿದೆ. ಬ್ಯಾಂಕಾಕ್ ನ ಲ್ಲಿ ಕುಸಿದುಬಿದ್ದ ಮತ್ತೊಂದು ಕಟ್ಟಡದಡಿ ಕನಿಷ್ಠ 50 ಕಾರ್ಮಿಕರು ಸಿಕ್ಕಿಬಿದ್ದಿರುವ ಶಂಕೆಯಿದೆ.