ಇಂಗ್ಲೆಂಡ್, ವೇಲ್ಸ್ ನಲ್ಲಿ ಈಗ ಅತ್ಯಂತ ಜನಪ್ರಿಯ ಹೆಸರು ʼಮುಹಮ್ಮದ್ʼ!
ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ʼಮುಹಮ್ಮದ್ʼ ಎನ್ನುವುದು ಗಂಡು ಮಗುವಿನ ಅತ್ಯಂತ ಜನಪ್ರಿಯ ಹೆಸರಾಗಿದೆ ಎಂದು ಆಫೀಸ್ ಫಾರ್ ನ್ಯಾಶನಲ್ ಸ್ಟ್ಯಾಟಿಸ್ಟಿಕ್ಸ್(ONS) ವರದಿ ಹೇಳಿದೆ.
ಇಂಗ್ಲೆಂಡ್ ನಲ್ಲಿ ಈ ಮೊದಲು ನೋವಾ(Noah) ಎನ್ನುವ ಹೆಸರು ಹೆಚ್ಚು ಜನಪ್ರಿಯವಾಗಿತ್ತು. ಅಂದರೆ ಹೆಚ್ಚಿನ ಶಿಶುಗಳಿಗೆ ನೋವಾ ಎನ್ನುವ ಹೆಸರಿಡಲಾಗುತ್ತಿತ್ತು. ಆದರೆ ಮುಹಮ್ಮದ್ ಎನ್ನುವ ಹೆಸರು 2023ರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹೆಚ್ಚಿನ ಗಂಡು ಶಿಶುಗಳಿಗೆ ಮುಹಮ್ಮದ್ ಎಂದು ಹೆಸರಿಡಲಾಗುತ್ತಿದೆ. ʼನೋವಾʼ 2022ರಲ್ಲಿ ಎರಡನೇ ಅತ್ಯಂತ ಜನಪ್ರಿಯ ಹೆಸರು ಎಂದು ಖ್ಯಾತಿ ಗಳಿಸಿತ್ತು. 2016 ರಿಂದ ಇಂಗ್ಲೆಂಡ್ ಮತ್ತು ವೇಲ್ಸ್ ನ ಟಾಪ್ 10 ಅತ್ಯಂತ ಜನಪ್ರಿಯ ಹೆಸರುಗಳಲ್ಲಿತ್ತು.
ʼನೋವಾʼ(Noah) 2023ರಲ್ಲಿ ಗಂಡು ಮಕ್ಕಳ ಹೆಸರುಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, "ಆಲಿವರ್" ಮೂರನೇ ಸ್ಥಾನದಲ್ಲಿತ್ತು. 2023ರಲ್ಲಿ ಜನಿಸಿದ 4,661 ಶಿಶುಗಳಿಗೆ ಮುಹಮ್ಮದ್ ಎಂದು ಹೆಸರಿಡಲಾಗಿದೆ. 2022ರಲ್ಲಿ 4,177 ಶಿಶುಗಳಿಗೆ ಮುಹಮ್ಮದ್ ಎಂದು ಹೆಸರಿಡಲಾಗಿತ್ತು. 2023ರಲ್ಲಿ 4,382 ಶಿಶುಗಳಿಗೆ "ನೋವಾ" ಎಂದು ಹೆಸರಿಡಲಾಗಿತ್ತು.
ಇಂಗ್ಲೆಂಡ್ ಮತ್ತು ವೇಲ್ಸ್ ನ 10 ಪ್ರದೇಶಗಳ ಪೈಕಿ ನಾಲ್ಕರಲ್ಲಿ ಮುಹಮ್ಮದ್ ಎನ್ನುವುದು ಜನಪ್ರಿಯ ಹೆಸರಾಗಿದೆ. "ಮುಹಮ್ಮದ್" ಹೆಸರಿನ ಇತರ ಎರಡು ರೂಪಾಂತರಗಳಾದ "ಮೊಹಮ್ಮದ್" (Mohammed) ಮತ್ತು ʼಮೊಹಮ್ಮದ್ (Mohammad) ಅಗ್ರ 100ರಲ್ಲಿ ಕ್ರಮವಾಗಿ 28ನೇ ಮತ್ತು 68ನೇ ಸ್ಥಾನದಲ್ಲಿದೆ.
2023ರಲ್ಲಿ "ಒಲಿವಿಯಾ", "ಅಮೆಲಿಯಾ" ಮತ್ತು "ಇಸ್ಲಾ" ಮೂರು ಅತ್ಯಂತ ಜನಪ್ರಿಯ ಹೆಣ್ಣು ಮಕ್ಕಳ ಹೆಸರಾಗಿತ್ತು. "ಒಲಿವಿಯಾ" 2016ರಿಂದ ಹೆಣ್ಣು ಮಗುವಿನ ಹೆಸರುಗಳ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕದ ಹೆಸರಾಗಿದೆ.
ಸೌಜನ್ಯ : timesofindia