ಮೂರು ವಾರಗಳ ಅರಾಜಕ ಸ್ಥಿತಿ ಅಂತ್ಯ: ಅಮೆರಿಕ ಸದನಕ್ಕೆ ಮೈಕ್ ಜಾನ್ಸನ್ ಸ್ಪೀಕರ್

Update: 2023-10-26 03:22 GMT

Photo: twitter.com/RepMikeJohnson

ವಾಷಿಂಗ್ಟನ್: ಅಮೆರಿಕದಲ್ಲಿ ಮೂರು ವಾರಗಳ ರಾಜಕೀಯ ಪ್ರಹಸನ ಕೊನೆಗೂ ಸುಖಾಂತ್ಯವಾಗಿದ್ದು, ಹೊಸ ಸ್ಪೀಕರ್ ಆಗಿ ಮೈಕ್ ಜಾನ್ಸನ್ ಅವರನ್ನು ಸದನ ಆಯ್ಕೆ ಮಾಡಿದೆ.

ಅಷ್ಟೊಂದು ಪರಿಚಿತರಲ್ಲದ ಜಾನ್ಸನ್ ಅವರನ್ನು ರಿಪಬ್ಲಿಕನ್ನರು ಹೊಸ ಹುದ್ದೆಗೆ ಆಯ್ಕೆ ಮಾಡಿದ್ದು, ರಾಜಕೀಯ ಅರಾಜಕತೆ ಕೊನೆಗೊಂಡಂತಾಗಿದೆ. ಮತದಾನ ಪ್ರಕ್ರಿಯೆ ಮುಂದುವರಿದಿದ್ದು, ಲೂಸಿಯಾನಾದ ಜಾನ್ಸನ್ ಬಹುತೇಕ ಎಲ್ಲ ರಿಪಬ್ಲಿಕನ್ನರ ಬೆಂಬಲ ಖಾತರಿಪಡಿಸಿಕೊಂಡಿದ್ದಾರೆ. ಸದನದ ಜಿಓಪಿ ನಾಯಕತ್ವ ತಂಡದಲ್ಲಿ ಕೆಳಸ್ತರದ ನಾಯಕರಾಗಿರುವ ಜಾನ್ಸನ್, ಪಕ್ಷದ ನಾಲ್ಕನೇ ಅಭ್ಯರ್ಥಿಯಾಗಿದ್ದು, ಮುಖ್ಯವಾಗಿ ಡೊನಾಲ್ಡ್ ಟ್ರಂಪ್ ಅವರಿಂದ ಬೆಂಬಲ ಹೊಂದಿದ್ದಾರೆ.

"ಜಾನ್ಸನ್ ಅದ್ಭುತ ಸ್ಪೀಕರ್ ಆಗುತ್ತಾರೆ ಎಂಬ ನಂಬಿಕೆ ನನ್ನದು" ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. 2024 ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಮುಂಚೂಣಿ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದಾರೆ. ಜಾನ್ಸನ್ ಬಗ್ಗೆ ಎಂದೂ ಋಣಾತ್ಮಕ ಹೇಳಿಕೆಯನ್ನು ಕೇಳಿಲ್ಲ. ಪ್ರತಿಯೊಬ್ಬರೂ ಅವರನ್ನು ಇಷ್ಟಪಡುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News