ಟ್ರಂಪ್ ಹತ್ಯಾ ಯತ್ನಕ್ಕೆ ವ್ಯಾಪಕ ಖಂಡನೆ

Update: 2024-07-14 16:23 GMT

ವಾಷಿಂಗ್ಟನ್ : ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ನಡೆದ ಪ್ರಯತ್ನವನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಅಧ್ಯಕ್ಷ ಜೋ ಬೈಡನ್, ಉದ್ಯಮಿಗಳಾದ ಜೆಫ್ ಬೆಝೋಸ್, ಬಿಲ್ ಆಕ್ಮನ್, ಎಲಾನ್ ಮಸ್ಕ್ ಸಹಿತ ಪ್ರಮುಖರು ಖಂಡಿಸಿದ್ದಾರೆ.

`ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಖಂಡಿತಾ ಜಾಗವಿಲ್ಲ. ಏನಾಯಿತು ಎಂದು ನಮಗೆ ಇನ್ನೂ ನಿಖರವಾಗಿ ತಿಳಿದಿಲ್ಲವಾದರೂ ಮಾಜಿ ಅಧ್ಯಕ್ಷ ಟ್ರಂಪ್ ಗಂಭೀರ ಗಾಯಗೊಂಡಿಲ್ಲ ಎಂದು ನಾವು ನಿರಾಳರಾಗಬೇಕು' ಎಂದು ಒಬಾಮಾ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

`ಹೆಜ್ಫೌಂಡ್' ಸ್ಥಾಪಕ ಬಿಲ್ ಆಕ್ಮನ್, ಟೆಸ್ಲಾ ಮಾಲಕ ಎಲಾನ್ ಮಸ್ಕ್, ಗೂಗಲ್ ಸಿಇಒ ಸುಂದರ್ ಪಿಚೈ, `ಓಪನ್ ಎಐ' ಸಿಇಒ ಸ್ಯಾಮ್ ಆಲ್ಟ್ಮನ್, ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಮುಂತಾದವರು ದಾಳಿಯನ್ನು ಖಂಡಿಸಿದ್ದು ಟ್ರಂಪ್ರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

ಸ್ನೇಹಿತ ಟ್ರಂಪ್ರ ಹತ್ಯೆಗೆ ನಡೆದಿರುವ ಪ್ರಯತ್ನದಿಂದ ತೀವ್ರ ಕಳವಳಗೊಂಡಿರುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News