ಉತ್ತರ ಸಿರಿಯಾದಲ್ಲಿ ಟರ್ಕಿ ಬೆಂಬಲಿತ ಪಡೆಗಳ ಮುನ್ನಡೆ
Update: 2024-12-12 15:34 GMT
ದಮಾಸ್ಕಸ್ : ಉತ್ತರ ಸಿರಿಯಾದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನಗೊಳಿಸುವ ಉದ್ದೇಶದಿಂದ ಟರ್ಕಿ ಬೆಂಬಲಿತ ಪಡೆಗಳು ನಿರಂತರ ಮುನ್ನಡೆ ಸಾಧಿಸುತ್ತಿವೆ ಎಂದು ಟರ್ಕಿ ರಕ್ಷಣಾ ಪಡೆಯ ಮೂಲಗಳು ಗುರುವಾರ ಹೇಳಿವೆ.
ಉತ್ತರ ಸಿರಿಯಾದಲ್ಲಿ ಟರ್ಕಿ ಬೆಂಬಲಿತ ಬಂಡುಕೋರ ಪಡೆ ಹಾಗೂ ಅಮೆರಿಕ ಬೆಂಬಲಿತ ಕುರ್ದಿಶ್ ಸಶಸ್ತ್ರ ಹೋರಾಟಗಾರರ ಗುಂಪು(ಎಸ್‍ಸಿಎಫ್) ನಡುವೆ ಸಂಘರ್ಷ ತೀವ್ರಗೊಂಡಿದೆ. ಉತ್ತರ ಸಿರಿಯಾದಲ್ಲಿ ಐಸಿಸ್ ವಿರುದ್ಧದ ಹೋರಾಟಕ್ಕೆ ಕುರ್ದಿಶ್ ಸಶಸ್ತ್ರ ಹೋರಾಟಗಾರರ ಗುಂಪು `ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್(ಎಸ್‍ಡಿಎಫ್)'ಗೆ ಬೆಂಬಲ ನೀಡುವುದಾಗಿ ಅಮೆರಿಕ ಹೇಳುತ್ತಿದೆ. ಆದರೆ ಎಸ್‍ಡಿಎಫ್ ಕೂಡಾ ಬಂಡುಕೋರ ಸಂಘಟನೆ ಎಂದು ಟರ್ಕಿ ಪ್ರತಿಪಾದಿಸುತ್ತಿದೆ.