ಇಸ್ರೇಲ್‌ ಮೇಲೆ ಹಮಾಸ್‌ ದಾಳಿ ಗಂಭೀರ ಬೆಳವಣಿಗೆ, ಆಘಾತಕಾರಿ ಎಂದ ಯುಎಇ

Update: 2023-10-09 10:23 GMT

Photo: PTI

ದುಬೈ: ಫೆಲೆಸ್ತೀನ್ ನ ಹಮಾಸ್‌ ಹೋರಾಟಗಾರರು ಇಸ್ರೇಲ್‌ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸಿರುವ ಸಂಯುಕ್ತ ಅರಬ್‌ ಸಂಸ್ಥಾನವು ಈ ದಾಳಿಗಳನ್ನು ಗಂಭೀರ ಬೆಳವಣಿಗೆ ಎಂದು ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿರುವ ಯುಎಇ ವಿದೇಶಾಂಗ ಸಚಿವಾಲಯ, ಹಮಾಸ್‌ ಹೋರಾಟಗಾರರು ಇಸ್ರೇಲಿ ನಾಗರಿಕರನ್ನು ತಮ್ಮ ಮನೆಗಳಿಂದ ಒತ್ತೆಯಾಳಾಗಿರಿಸುತ್ತಿದ್ದಾರೆಂಬ ವರದಿಗಳು “ಆಘಾತಕಾರಿ” ಎಂದು ಹೇಳಿದೆ.

“ಎರಡೂ ಕಡೆಗಳಲ್ಲಿ ನಾಗರಿಕರಿಗೆ ಅಂತಾರಾಷ್ಟ್ರೀಯ ಮಾನವೀಯ ಕಾನೂನಿನಡಿಯಡಿಯಲ್ಲಿ ಸಂಪೂರ್ಣ ರಕ್ಷಣೆ ದೊರೆಯಬೇಕು ಮತ್ತು ಸಂಘರ್ಷದಲ್ಲಿ ಅವರನ್ನು ಗುರಿಯಾಗಿಸಬಾರದು,” ಎಂದು ಸಚಿವಾಲಯ ಹೇಳಿದೆ.

ಫೆಲೆಸ್ತೀನಿಗೆ ಸಂಬಂಧಿಸಿದಂತೆ ದಶಕಗಳ ಕಾಲ ಅರಬ್‌ ದೇಶಗಳು ಹೊಂದಿದ್ದ ನೀತಿಯಿಂದ ದೂರ ಸರಿದು ಸಂಯುಕ್ತ ಅರಬ್‌ ಸಂಸ್ಥಾನವು 2020 ರಲ್ಲಿ ಇಸ್ರೇಲ್‌ ಜೊತೆ ಸಹಜ ಸಂಬಂಧ ಹೊಂದಿದ ಪ್ರಥಮ ಗಲ್ಫ್‌ ದೇಶವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News