ಮೆಕ್ಸಿಕೋ: ಕಚೇರಿ ಸಿಬ್ಬಂದಿಗೆ ಗನ್ ಗುರಿಯಿಟ್ಟ ಬ್ರಿಟನ್ ರಾಯಭಾರಿ ವಜಾ

Update: 2024-06-01 15:41 GMT

@subdiplomatic/Twitter

ಮೆಕ್ಸಿಕೋ ಸಿಟಿ, ಜೂ.1: ಮೆಕ್ಸಿಕೋದಲ್ಲಿರುವ ಬ್ರಿಟನ್ ರಾಯಭಾರಿ ಕಚೇರಿಯ ಸ್ಥಳೀಯ ಉದ್ಯೋಗಿಗೆ ಗನ್ ಗುರಿಯಿಟ್ಟ ರಾಯಭಾರಿ ಜಾನ್ ಬೆಂಜಮಿನ್‍ರನ್ನು ಹುದ್ದೆಯಿಂದ ವಜಾಗೊಳಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ `ದಿ ಗಾರ್ಡಿಯನ್' ವರದಿ ಮಾಡಿದೆ.

ಕ್ರಿಮಿನಲ್ ಗ್ಯಾಂಗ್‍ಗಳು ಸಕ್ರಿಯವಾಗಿರುವ ಮೆಕ್ಸಿಕೋದ ಡುರಾಂಗೊ ಮತ್ತು ಸಿನಲೋವ ನಗರಗಳಿಗೆ ಬ್ರಿಟನ್ ರಾಯಭಾರಿ ಅಧಿಕೃತ ಭೇಟಿ ನೀಡಿದ್ದ ಸಂದರ್ಭ ಈ ಘಟನೆ ನಡೆದಿದ್ದು ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಬ್ರಿಟನ್ ಸರಕಾರ ಕ್ರಮ ಕೈಗೊಂಡಿದೆ. ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಬೆಂಜಮಿನ್ ತನ್ನ ಪಕ್ಕ ಕುಳಿತಿದ್ದ ಸಿಬಂದಿಯತ್ತ ಗನ್ ಗುರಿಯಿರಿಸಿರುವುದು ಹಾಗೂ ಆ ಸಿಬಂದಿ ಆತಂಕದಿಂದ ನೋಡುತ್ತಿರುವ ವೀಡಿಯೊ ವೈರಲ್ ಆಗಿದೆ. ಬೆಂಜಮಿನ್‍ರ ಭದ್ರತಾ ಸಿಬಂದಿಗೆ ಸೇರಿದ ಗನ್ ಇದಾಗಿದ್ದು ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಭದ್ರತಾ ಸಿಬಂದಿಯನ್ನೂ ಸೇವೆಯಿಂದ ವಜಾಗೊಳಿಸಿರುವುದಾಗಿ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News