ಉಕ್ರೇನ್ ದೀರ್ಘವ್ಯಾಪ್ತಿಯ ಕ್ಷಿಪಣಿ ಬಳಸಿದಲ್ಲಿ ಕೀವ್ ನಗರವನ್ನು ಸರ್ವನಾಶ ಮಾಡುವೆ : ರಶ್ಯ ಬೆದರಿಕೆ
Update: 2024-09-14 16:45 GMT
ಮಾಸ್ಕೋ : ಒಂದು ವೇಳೆ ಉಕ್ರೇನ್ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿದ್ದಲ್ಲಿ ಅದಕ್ಕೆ ಪ್ರತ್ಯುತ್ತರವಾಗಿ ರಾಜಧಾನಿ ನಗರ ಕೀವ್ ಅನ್ನು ನಾಶಪಡಿಸುವುದಾಗಿ ರಶ್ಯದ ಹಿರಿಯ ಭದ್ರತಾ ಅಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ರಶ್ಯದ ಕುರ್ಸ್ಕ್‌ಪ್ರಾಂತದೊಳಗೆ ನುಸುಳಿರುವುದರಿಂದ ಅಣ್ವಸ್ತ್ರಗಳನ್ನು ಬಳಸಲು ರಶ್ಯಕ್ಕೆ ಔಪಚಾರಿಕ ನೆಲೆಗಟ್ಟಿದ್ದರೂ, ರಶ್ಯವು ಹಾಗೆ ಮಾಡದು ಎಂದವರು ಹೇಎಳಿದರು. ಒಂದು ವೇಳೆ ರಶ್ಯ ಅಧ್ಯಕ್ಷ ಪುಟಿನ್ ಅವರ ಸಹನೆ ಕಳೆದುಕೊಂಡಲ್ಲಿ ಉಕ್ರೇನ್ ರಾಜಧಾನಿ ಕೀವ್ ನಗರವು ಬೃಹತ್ ಅಗ್ನಿಕುಂಡವಾಗಿ ಪರಿವರ್ತನೆಯಾಗಲಿದೆ ಎಂದವರು ಹೇಳಿದರು.