ಯುದ್ಧದಲ್ಲಿ ಅಮೆರಿಕ ಈಗಾಗಲೇ ಮಿಲಿಟರಿಯಾಗಿ ತೊಡಗಿಸಿಕೊಂಡಿದೆ: ಇರಾನ್ ಆರೋಪ

Update: 2023-10-16 18:23 GMT

Photo: PTI

ಟೆಹ್ರಾನ್: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಅಮೆರಿಕ ಈಗಾಗಲೇ ಭಾಗಿಯಾಗಿರುವುದರಿಂದ ಯುದ್ಧದ ದುರಂತಕ್ಕೆ ಅದನ್ನು ಹೊಣೆಯಾಗಿಸಬೇಕು ಎಂದು ಇರಾನ್ ನ ಅಧಿಕಾರಿಗಳು ಆರೋಪಿಸಿದ್ದಾರೆ.

ಸಂಷರ್ಘದಲ್ಲಿ ಅಮೆರಿಕ ಭಾಗಿಯಾದರೆ ಇರಾನ್ ಕೂಡಾ ಪಾಲ್ಗೊಳ್ಳುವುದೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ನಾಸೆರ್ ಕನ್ನಾನಿ ‘ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದಲ್ಲಿ ಅಮೆರಿಕ ಈಗಾಗಲೇ ಮಿಲಿಟರಿಯಾಗಿ ತೊಡಗಿಸಿಕೊಂಡಿದೆ ಎಂದು ನಾವು ಪರಿಗಣಿಸಿದ್ದೇವೆ. ಯೆಹೂದಿ ಆಡಳಿತದ ಅಪರಾಧ ಕೃತ್ಯಗಳು ಅಮೆರಿಕದ ಬೆಂಬಲದಿಂದ ನಡೆಯುತ್ತಿದೆ ಮತ್ತು ಇದಕ್ಕೆ ಅಮೆರಿಕವನ್ನೇ ಹೊಣೆಯಾಗಿಸಬೇಕು’ ಎಂದರು.

ಫೆಲೆಸ್ತೀನೀಯರ ವಿರುದ್ಧದ ಆಕ್ರಮಣವನ್ನು ಅಂತ್ಯಗೊಳಿಸದಿದ್ದರೆ ಈ ವಲಯದ ಇತರ ದೇಶಗಳೂ ಕಾರ್ಯನಿರ್ವಹಿಸಲು ಸಿದ್ಧವಾಗಿವೆ ಎಂದು ಇರಾನಿನ ವಿದೇಶಾಂಗ ಸಚಿವ ಹುಸೇನ್ ಅಮಿರಬ್ದುಲ್ಲಾಹಿಯಾನ್ ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸಂಘರ್ಷ ಈ ವಲಯದ ಇತರ ಪ್ರದೇಶಗಳಿಗೆ ವ್ಯಾಪಿಸಿದರೆ ಅಥವಾ ಈಗ ನಡೆಯುತ್ತಿರುವ ಸಂಘರ್ಷ ಉಲ್ಬಣಿಸಿದರೆ ಅದರ ಹೊಣೆ ನೇರವಾಗಿ ಇಸ್ರೇಲ್ ಮತ್ತು ಅಮೆರಿಕದ ಹೆಗಲಿಗೆ ವರ್ಗಾವಣೆಯಾಗುತ್ತದೆ ಎಂದವರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News