ಕೆಂಪು ಸಮುದ್ರದಲ್ಲಿ 10 ಹೌದಿ ಬಂಡುಗೋರರ ಹತ್ಯೆ: ಅಮೆರಿಕ
Update: 2024-01-01 17:54 GMT
ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ಅಮೆರಿಕದ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಟ 10 ಹೌದಿ ಬಂಡುಗೋರರು ಹತರಾಗಿರುವುದಾಗಿ ಯೆಮನಿನ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಯೆಮನಿನಲ್ಲಿ ಹೌದಿಗಳ ನಿಯಂತ್ರಣ ಪ್ರದೇಶದಿಂದ 4 ದೋಣಿಗಳಲ್ಲಿ ಸಾಗಿಬಂದ ಹೌದಿ ಬಂಡುಗೋರರು ಕೆಂಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ಕಂಟೈನರ್ ಹಡಗಿನತ್ತ ಗುಂಡಿನ ದಾಳಿ ನಡೆಸಿದ್ದು ಹಡಗನ್ನು ಹೈಜಾಕ್ ಮಾಡಲು ಪ್ರಯತ್ನಿಸಿದ್ದಾರೆ. ಅಮೆರಿಕ ನೌಕಾಪಡೆಯ ಹೆಲಿಕಾಪ್ಟರ್ಗಳು ನಡೆಸಿದ ದಾಳಿಯಲ್ಲಿ ಮೂರು ದೋಣಿಗಳು ಮುಳುಗಿದ್ದು ಹಲವರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ರವಿವಾರ ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯೆಮನ್ ಅಧಿಕಾರಿಗಳು, ಅಮೆರಿಕದ ದಾಳಿಯಲ್ಲಿ ಕನಿಷ್ಟ 10 ಹೌದಿಗಳು ಹತರಾಗಿದ್ದು ಗಾಯಗೊಂಡ 4 ಮಂದಿ ಮತ್ತೊಂದು ದೋಣಿಯ ಮೂಲಕ ಅಲ್ಲಿಂದ ಪರಾರಿಯಾಗಲು ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.