ಅಧಿಕಾರಕ್ಕೆ ಬಂದರೆ ಭಾರತದ ತೆರಿಗೆಗೆ ಪ್ರತಿಯಾಗಿ ತೆರಿಗೆ ವಿಧಿಸುತ್ತೇನೆ ಎಂದ ಟ್ರಂಪ್

Update: 2023-08-21 07:35 GMT

ಡೊನಾಲ್ಡ್ ಟ್ರಂಪ್ (PTI)

ವಾಷಿಂಗ್ಟನ್: ಮತ್ತೊಮ್ಮೆ ಅಮೆರಿಕಾ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಾ ಉತ್ಪನ್ನಗಳು, ನಿರ್ದಿಷ್ಟವಾಗಿ ಜನಪ್ರಿಯ ಹಾರ್ಲೆ-ಡೇವಿಡ್ಸನ್ ಮೋಟರ್ ಸೈಕಲ್ ಗಳ ಮೇಲೆ ಭಾರತವು ವಿಧಿಸುತ್ತಿರುವ ಅಧಿಕ ತೆರಿಗೆಯ ಬಗ್ಗೆ ಧ್ವನಿ ಎತ್ತಿದ್ದು, ಒಂದು ವೇಳೆ ನಾನು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ಭಾರತದ ಮೇಲೆ ಪ್ರತಿ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ.

ತಮ್ಮ ಪ್ರಥಮ ಅಧ್ಯಕ್ಷೀಯ ಅವಧಿಯಲ್ಲಿ ಭಾರತವನ್ನು ತೆರಿಗೆಗಳ ದೊರೆ ಎಂದು ಬಣ್ಣಿಸಿದ್ದ ಟ್ರಂಪ್, ಭಾರತವು ತನ್ನ ಮಾರುಕಟ್ಟೆಗಳಿಗೆ ಅಮೆರಿಕಾಕ್ಕೆ ಸಮಾನ ಹಾಗೂ ಸಮಂಜಸವಾದ ಪ್ರವೇಶ ಒದಗಿಸಿಲ್ಲ ಎಂದು ಆರೋಪಿಸಿ, ಮೇ 2019ರಲ್ಲಿ ಅಮೆರಿಕಾ ಮಾರುಕಟ್ಟೆ ಪ್ರವೇಶಿಸಲು ಭಾರತಕ್ಕಿದ್ದ ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆಯನ್ನು (GOP) ರದ್ದುಪಡಿಸಿದ್ದರು.

Fox Business News ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ, ಭಾರತದ ತೆರಿಗೆ ದರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಡೊನಾಲ್ಡ್ ಟ್ರಂಪ್, ಈ ತೆರಿಗೆ ದರಗಳು ತೀರಾ ದುಬಾರಿಯಾಗಿವೆ ಎಂದು ಆರೋಪಿಸಿದ್ದಾರೆ.

“ನಾನು ತೆರಿಗೆಗಳ ದರವನ್ನು ಹೋಲಿಸುವುದಿದ್ದರೆ ಭಾರತದ ದುಬಾರಿ ತೆರಿಗೆ ದರಗಳೊಂದಿಗೆ ಹೋಲಿಸುತ್ತೇನೆ. ಇದನ್ನು ನಾನು ಹಾರ್ಲೆ-ಡೇವಿಡ್ಸನ್ ಉತ್ಪನ್ನಗಳ ವಿಚಾರದಲ್ಲಿ ಗಮನಿಸಿದ್ದೇನೆ. ಇದನ್ನು ನೀವು ಭಾರತದಂಥ ದೇಶದಲ್ಲಿ ಹೇಗೆ ಮಾಡುತ್ತೀರಿ? ಇದು ಸರಿಯಲ್ಲ ಸ್ವಾಮಿ, ಯಾಕೆ? ಅವರು ಶೇ. 100, ಶೇ. 150 ಹಾಗೂ ಶೇ. 200 ತೆರಿಗೆ ದರಗಳನ್ನು ಹೊಂದಿದ್ದಾರೆ” ಎಂದು ಟ್ರಂಪ್ ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News