ಪರಿಸರ ದುರಂತದ ಅಂಚಿನಲ್ಲಿ ಜಗತ್ತು: ವಿಶ್ವಸಂಸ್ಥೆ ಎಚ್ಚರಿಕೆ

Update: 2023-10-25 17:56 GMT
File Photo

ನ್ಯೂಯಾರ್ಕ್: ಜಗತ್ತು ಸರಣಿ ಪರಿಸರ ದುರಂತದ ಅಂಚಿನತ್ತ ಸಾಗುತ್ತಿದ್ದು ಇದು ನೀರು ಸರಬರಾಜು ಮತ್ತು ಇತರ ಜೀವಪೋಷಕ ವ್ಯವಸ್ಥೆಗಳ ಮೇಲೆ ಸರಿಪಡಿಸಲಾಗದಷ್ಟು ಹಾನಿಯುಂಟು ಮಾಡಬಹುದು ಎಂದು ವಿಶ್ವಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದೆ.

ಹವಾಮಾನ ಬದಲಾವಣೆ ಮತ್ತು ಸಂಪನ್ಮೂಲದ ಮಿತಿಮೀರಿದ ಬಳಕೆಯು ಜಗತ್ತನ್ನು ಆರು ಅಂತರ್ ಸಂಪರ್ಕಿತ ನಿರ್ಣಾಯಕ ಮಿತಿಯಲ್ಲಿರಿಸಿವೆ. ಇವು ನಮ್ಮ ಜೀವನ-ಸುಧಾರಿತ ವ್ಯವಸ್ಥೆಯಲ್ಲಿ ಹಠಾತ್ ಬದಲಾವಣೆಗೆ ಕಾರಣವಾಗಬಹುದು ಮತ್ತು ಸಮಾಜದ ಮೂಲಾಧಾರವನ್ನು ನಡುಗಿಸಬಹುದು' ಎಂದು ವಿಶ್ವಸಂಸ್ಥೆ ವಿಶ್ವವಿದ್ಯಾಲಯ ಪರಿಸರ ಮತ್ತು ಮಾನವ ಭದ್ರತೆಯ ಸಂಸ್ಥೆ ಹೇಳಿದೆ.

ಒಮ್ಮೆ ಈ ಮಿತಿಗಳನ್ನು ದಾಟಿದ ನಂತರ ವ್ಯವಸ್ಥೆಯು ಸಹಜವಾಗಿ ಕಾರ್ಯನಿರ್ವಹಿಸಲು ವಿಫಲವಾಗುತ್ತದೆ ಮತ್ತು ಹೊಸ ಅಪಾಯಗಳು ಎದುರಾಗಬಹುದು ಮತ್ತು ಈ ಹೊಸ ಅಪಾಯಗಳು ಇತರ ವ್ಯವಸ್ಥೆಗಳಿಗೆ ವರ್ಗಾವಣೆಯಾಗಬಹುದು ಎಂದು ಸಂಸ್ಥೆಯ ಸಂಶೋಧಕ ಜಾಕ್ ಒ'ಕಾನರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News