ಝೆಲೆನ್‍ಸ್ಕಿ ಹತ್ಯೆ ಸಂಚು: ಉಕ್ರೇನ್ ಭದ್ರತಾ ಅಧಿಕಾರಿಗಳ ಬಂಧನ

Update: 2024-05-07 17:13 GMT

ವೊಲೊದಿಮಿರ್ ಝೆಲೆನ್‍ಸ್ಕಿ | Image Credit source: PTI

ಕೀವ್: ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಸೇರಿದಂತೆ ಉನ್ನತ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಇಬ್ಬರು ಭದ್ರತಾ ಅಧಿಕಾರಿಗಳನ್ನು ಬಂಧಿಸಿರುವುದಾಗಿ ಉಕ್ರೇನ್ ಸರಕಾರದ ಮೂಲಗಳು ಹೇಳಿವೆ.

ಈ ಸಂಚನ್ನು ರಶ್ಯ ರೂಪಿಸಿದ್ದು ಉನ್ನತ ಅಧಿಕಾರಿಗಳಿಗೆ ಭದ್ರತೆ ಒದಗಿಸುವ `ಸ್ಟೇಟ್ ಗಾರ್ಡ್ ಆಫ್ ಉಕ್ರೇನ್'ನ ಇಬ್ಬರು ಕರ್ನಲ್‍ಗಳನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News