ಮಾನವ ಸಹಿತ ಗಗನಯಾನ ಪರಿಕ್ಷಾ ಉಡಾವಣೆ: 5 ಸೆಕೆಂಡ್‌ ಇರುವಾಗ ತಡೆಹಿಡಿದ ಇಸ್ರೋ

Update: 2023-10-21 04:39 GMT

Photo: twitter.com/isro

ಹೊಸದಿಲ್ಲಿ: ಮಾನವ ಸಹಿತ ಗಗನಯಾನ ಬಾಹ್ಯಾಕಾಶ ಮಿಷನ್‌ನ ಮೊದಲ ಪ್ರಯೋಗ ಪರೀಕ್ಷೆಯನ್ನು ಇಂದು ಬೆಳಿಗ್ಗೆ ನಿಗದಿತ ಉಡಾವಣೆಗಿಂತ ಕೆಲವೇ ಸೆಕೆಂಡ್‌ಗಳ ಮುಂಚೆ ತಡೆಹಿಡಿಯಲಾಗಿದೆ. ಇದಕ್ಕೆ ಕಾರಣವನ್ನು ಇನ್ನೂ ಇಸ್ರೋ ನೀಡಿಲ್ಲ.

ಇಂಜಿನ್‌ ಇಗ್ನಿಶನ್‌ ನಿಗದಿಯಂತೆ ನಡೆದಿರದೇ ಇರುವುದೇ ಸಮಸ್ಯೆಗೆ ಕಾರಣ. ಏನು ತಪ್ಪಾಯಿತೆಂದು ನಾವು ತಿಳಿಯಬೇಕಿದೆ. ವಾಹನ ಸುರಕ್ಷಿತವಾಗಿದೆ, ತನಿಖೆಯ ನಂತರ ಕಾರಣ ತಿಳಿಸಲಾಗುವುದು ಎಂದು ಇಸ್ರೋ ಮುಖ್ಯಸ್ಥ ಎಸ್‌ ಸೋಮನಾಥ್‌ ಅವರು ಮಿಷನ್‌ ನಿಯಂತ್ರಣ ಕೇಂದ್ರದಿಂದ ಮಾಹಿತಿ ನೀಡಿದ್ದಾರೆ.

ಎಂಟು ಗಂಟೆಗೆ ಟೆಸ್ಟ್‌ ವೆಹಿಕಲ್‌ ಡಿ1 ಉಡಾವಣೆಯಾಗಬೇಕಿದ್ದರೆ ಅದನ್ನು 8.45ಕ್ಕೆ ಮುಂದೂಡಲಾಯಿತು. ಆದರೆ ಅದಕ್ಕೆ ಇನ್ನೇನು ಐದು ಸೆಕೆಂಡ್‌ಗಳಿವೆ ಎನ್ನುವಾಗ ಕೌಂಟ್‌ಡೌನ್‌ ನಿಲ್ಲಿಸಲಾಯಿತು. ಪರೀಕ್ಷಾ ಉಡಾವಣೆಯ ಮುಂದಿನ ದಿನಾಂಕವನ್ನು ಇಸ್ರೋ ಸದ್ಯದಲ್ಲಿಯೇ ಘೋಷಿಸುವ ನಿರೀಕ್ಷೆಯಿದೆ.

ಬಾಹ್ಯಾಕಾಶಕ್ಕೆ ಮಾನವರನ್ನು ಕಳಿಸುವ ಉದ್ದೇಶದ ಗಗನಯಾನ ಮಿಷನ್‌ನ ಪೂರ್ವಭಾವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಯಬೇಕಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News