ಕಲಬುರಗಿ | ಸಾಲಬಾಧೆಯಿಂದ ನೊಂದ ರೈತ ಆತ್ಮಹತ್ಯೆ
Update: 2024-11-09 09:13 GMT
ಕಲಬುರಗಿ : ಸಾಲಬಾಧೆಯಿಂದ ನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿ ತಾಲ್ಲೂಕಿನ ನರನಾಳ ಗ್ರಾಮದಲ್ಲಿ ನಡೆದಿದೆ.
ಮೃತ ರೈತನ್ನು ನರನಾಳ ಗ್ರಾಮದ ನಿವಾಸಿ ನಾಗಪ್ಪಾ ಎಂದು ಗುರುತಿಸಲಾಗಿದೆ. ಮೃತರಿಗೆ ಪತ್ನಿ ಇಬ್ಬರು ಮಕ್ಕಳು ಇದ್ದಾರೆ.
ಮೃತ ನಾಗಪ್ಪ ಫೈನಾನ್ಸ್‌ವೊಂದರಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದರು. ಫೈನಾನ್ಸ್‌ನವರು ಹಣ ಕಟ್ಟುವಂತೆ ಮನೆಯ ಮುಂದೆ ಬಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಜಿಗುಪ್ಸೆಗೊಂಡು ನಾಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿದ್ದಾರೆ.
ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.