ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ: ಮಗು ಸಹಿತ ನಾಲ್ವರು ಮೃತ್ಯು

Update: 2023-12-21 04:49 GMT

ಕಲಬುರಗಿ, ಡಿ.21: ಕಮಾಂಡರ್ ಜೀಪ್ ಮತ್ತು ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಐದು ವರ್ಷದ ಮಗು ಸಹಿತ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಅಫ್ಝಲ್ ಪುರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಮಾಡ್ಯಾಳ ಗ್ರಾಮದ ಸಂತೋಷ ಹೂವಣ್ಣ ಗೌಡಗಾಂವ (40), ಶಂಕರ ದೇವಪ್ಪ ಜಳಕಿ (55), ಸಿದ್ದಮ್ಮ ಶಂಕರ ಜಳಕಿ ಮತ್ತು ಹುಚ್ಚಪ್ಪ ಮಹಾಂತೇಶ ಜಳಕಿ (5) ಮೃತಪಟ್ಟವರು. ಮಗುವಿನ ತಾಯಿ ಪೂಜಾ ಮಹಾಂತೇಶರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಅಫ್ಝಲ್ ಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News