ಕಲಬುರಗಿ: ವೈದ್ಯರ ನಿರ್ಲಕ್ಷ್ಯ ಆರೋಪ; ಜಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಮೃತ್ಯು
Update: 2025-03-14 11:32 IST

ಕಲಬುರಗಿ: ಗುರುವಾರ ಸಂಜೆ ವೇಳೆಯಲ್ಲಿ ವೈದ್ಯರಿಲ್ಲದ ಹಿನ್ನಲೆ, ತಕ್ಷಣಕ್ಕೆ ಸಿಬ್ಬಂದಿಯವರು ತಪಾಸಣೆ ನಡೆಸದೆ ನಿರ್ಲಕ್ಷ್ಯ ತೋರಿರುವುದರಿಂದ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ (ಜಿಮ್ಸ್) ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಭಾರತ್ ನಗರ ತಾಂಡಾ ನಿವಾಸಿ ಶಾರದಾಬಾಯಿ (65) ಮತ್ತು ಉದನೂರ್ ತಾಂಡಾದ ನಿವಾಸಿ ದಶರಥ್ ರಾಠೋಡ್ (50) ಮೃತ ರೋಗಿಗಳೆಂದು ತಿಳಿದುಬಂದಿದೆ.
ಮೃತ ರೋಗಿಗಳಿಬ್ಬರೂ ಟಿಬಿ ರೋಗದಿಂದ ಬಳಲುತ್ತಿದ್ದರು, ಗುರುವಾರ ಸಂಜೆ ಒಂದು ಗಂಟೆ ಅಂತರದಲ್ಲಿ ವೈದ್ಯರ ಸಂಪೂರ್ಣ ನಿರ್ಲಕ್ಷ್ಯದಿಂದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಶಾರದಾಬಾಯಿ ಅವರು ಚಿಕಿತ್ಸೆಗಾಗಿ ಮಂಗಳವಾರ ಅಡ್ಮಿಟ್ ಆಗಿದ್ದು, ಇನ್ನೊಬ್ಬ ಮೃತ ರೋಗಿ ದಶರಥ್ ಎಂಬವರು ಗುರುವಾರ ಬೆಳಗ್ಗೆ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ತಿಳಿದುಬಂದಿದೆ.