ಕಲಬುರಗಿ | ಸಾಮಾಜಿಕ ಭದ್ರತಾ ಯೋಜನೆಯ ಮಹಾ ಲಾಗಿನ್ ದಿನ ಆಚರಣೆ

ಕಲಬುರಗಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕಲಬುರಗಿ ಜಿಲ್ಲಾಡಳಿತದ ನೆರವಿನೊಂದಿಗೆ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳ 50 ಗ್ರಾಮ ಪಂಚಾಯಿತಿಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆ (ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‍ಬಿವೈ) ಹಾಗೂ ಪ್ರಧಾನ್‍ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ನೋಂದಣಿಗಾಗಿ ಮಹಾ ಲಾಗಿನ್ ದಿನವನ್ನು ಬುಧವಾರ (ಮಾ.12 ರಂದು) ಆಚರಿಸಲಾಯಿತು.
ವಿವಿಧ ತಾಲೂಕಿನ ಗ್ರಾಮ ಪಂಚಾಯಿತಿಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಬ್ಯಾಂಕ್ ಗ್ರಾಹಕ ಸೇವಾ ಪೂರೈಕೆದಾರರ (ಬಿ.ಸಿ.ಗಳ) ಸಹಕಾರದೊಂದಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಬ್ಯಾಂಕ್ ಸಿಬ್ಬಂದಿಗಳು ಪಿ.ಎಮ್.ಎಸ್.ಬಿ.ವೈ. ಯೋಜನೆಯಡಿ ಸುಮಾರು 5,300 ಹಾಗೂ ಪಿ.ಎಮ್.ಜೆ.ಜೆ.ಬಿ.ವೈ. ಯೋಜನೆಯಡಿ 3,600 ಜನ ಸಾರ್ವಜನಿಕರಿಂದ ಅರ್ಜಿಯನ್ನು ನೋಂದಣಿ ಮಾಡಿಸಲಾಯಿತು.
ಇದೇ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ (ಪಿ.ಎಮ್.ಎಸ್.ಬಿ.ವೈ. ಹಾಗೂ ಪಿ.ಎಮ್.ಜೆ.ಜೆ.ಬಿ.ವೈ.) ಪ್ರಯೋಜನ ಪಡೆಯಬೇಕು ಎಂದು ಅರಿವು ಮೂಡಿಸಿದರು.
ಅದೇ ರೀತಿ ಕಾಳಗಿ ತಾಲೂಕಿನ ಗೋಟೂರ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡ ಮಹಾ ಮೇಗಾ ಲಾಗಿನ್ ಕಾರ್ಯಕ್ರಮದಲ್ಲಿ ಕಲಬುರಗಿ ಎಸ್.ಬಿ.ಐ. ಪ್ರಾದೇಶಿಕ ವ್ಯವಸ್ಥಾಪಕ ದೇವಕಿ ನಂದನ್ ಖಂಡೇಲ್‍ವಾಲ್, ಕಲಬುರಗಿ ಎಸ್.ಬಿ.ಐ. ಕಾಳಗಿ ಶಾಖೆಯ ಮುಖ್ಯ ವ್ಯವಸ್ಥಾಪಕ ಸದಾಶಿವ ವೀರಸಂಗಪ್ಪ ರಾತ್ರಿಕರ್, ಎಸ್.ಬಿ.ಐ. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಕುಮಾರ ಪಾಟೀಲ ಹಾಗೂ ಕಾಳಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾತನಾಡಿದರು.
ಜಿಲ್ಲೆಯಲ್ಲಿ ಮೇಗಾ ಲಾಗಿನ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ (ಪಿ.ಎಮ್.ಎಸ್.ಬಿ.ವೈ. ಹಾಗೂ ಪಿ.ಎಮ್.ಜೆ.ಜೆ.ಬಿ.ವೈ.) ಯಡಿ ವಿಮೆಯ ಮೊತ್ತವನ್ನು 10 ಫಲಾನುಭವಿಗಳಿಗೆ ತಲಾ 2 ಲಕ್ಷ ರೂ. ರಂತೆ ಒಟ್ಟು 20 ಲಕ್ಷ ರೂ.ಗಳ ಚೆಕ್‍ನ್ನು ವಿತರಿಸಲಾಯಿತು.