ಕಲಬುರಗಿ | ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ : ಹಿರೋಳಿಕರ್
ಕಲಬುರಗಿ : ಶೋಷಿತ ಸಮುದಾಯದ ಧ್ವನಿಯಾಗಿ ಅಂಧಕಾರದ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಿದ ಮಹಾನ್ ನಾಯಕಿ, ಈ ದೇಶ ಕಂಡ ಅಪರೂಪದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಜೋತಿಬಾ ಫುಲೆ ಅವರು ಅಧುನಿಕ ಸಮಾಜಕ್ಕೆ ಬೆಳಕು ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಕದಂಬ ಕಂಪ್ಯೂಟರ್ ತರಬೇತಿ ಕೇಂದ್ರದ ನಿರ್ದೇಶಕ ಸುನೀಲ ಹಿರೋಳಿಕರ್ ಹೇಳಿದರು.
ಆಳಂದ ಪಟ್ಟಣದ ಕದಂಬ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗಾಗಿ ಪ್ರತ್ಯೇಕ ಶಾಲೆಗಳು ಹಾಗೂ ಬಲಾಶ್ರಮಗಳನ್ನು ಸ್ಥಾಪಿಸಿದರು. ಅವರು ದೊಡ್ಡ ಸಮಾಜಸಂಸ್ಕೃತಿಯ ಕಡೆಗೆ ಹೆಜ್ಜೆ ಹಾಕಿದರು. ಇಂತಹ ಅವರ ಶಕ್ತಿಯನ್ನೂ, ದೇಶದ ಮೊದಲ ಮಹಿಳಾ ಶಿಕ್ಷಕಿ ಎಂದು ಬ್ರಿಟಿಷ್ ಸರ್ಕಾರ ಮಾನ್ಯತೆ ನೀಡಿತು. ನಾವು ಅವರ ಆದರ್ಶಗಳನ್ನು ಅನುಸರಿಸಿ, ಇಂದು ಇದೇ ರೀತಿ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಪ್ರಗತಿಪಡಿಸಲು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಸೀತರಾಮ ಜಮದಾರ, ಸಂಸ್ಥೆಯ ಶಿಕ್ಷಕಿ ಆಯಿಷಾ ಸೈಯದ್, ಸಂಗೀತಾ ರಾಠೋಡ, ಅರೀಪ ಅಲಿ ಕುಮಸೆ, ರಾಹುಲ್ ಉಕ್ರಂಡೆ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.