ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅನೇಕ ಕಾಲೇಜುಗಳು ನ್ಯಾಕ್ ನಿಂದ ಉತ್ತಮ ಶ್ರೇಣಿ ಪಡೆದಿವೆ : ಡಾ.ಅನಿಲಕುಮಾರ ಪಟ್ಟಣ
ಕಲಬುರಗಿ : ನಮ್ಮ ಸಂಸ್ಥೆಯ ಅನೇಕ ಕಾಲೇಜುಗಳು ನ್ಯಾಕ್ ಮೌಲ್ಯಮಾಪನದಲ್ಲಿ ಉನ್ನತ ಶ್ರೇಣಿ ಪಡೆದಿರುವುದು ನಮ್ಮ ಸಂಸ್ಥೆಯ ಹೆಮ್ಮೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಆಡಳಿತ ಮಂಡಳಿ ಸದಸ್ಯರು ಹಾಗೂ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರಾದ ಡಾ.ಅನಿಲಕುಮಾರ ಪಟ್ಟಣ ಹೇಳಿದರು.
ಅವರು ಇಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 12 ಅಂಶಗಳ ಸೇಲ್ ನ ನೇತೃತ್ವದಲ್ಲಿ ನಡೆದ ʼನ್ಯೂ ಮೇಥಡಾಲಾಜಿ ಆಪ್ ನ್ಯಾಕ್ ಬೈನರಿ ಅಕ್ರಿಡಿಯೇಷನ್ ಸಿಸ್ಟಮ್ʼ ಕುರಿತು ಸಿಬ್ಬಂದಿಗಳಿಗೆ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ NAAC ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಮಾನ್ಯತೆ ನೀಡುವುದರೊಂದಿಗೆ ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕುತ್ತದೆ.
ನ್ಯಾಕ್ ಕೇವಲ ಅನುಮೋದನೆ ನೀಡುವುದಷ್ಟೇ ಅದರ ಕೆಲಸವಲ್ಲ ಶಿಕ್ಷಣದ ಗುಣಮಟ್ಟ, ಕಾಲೇಜಿನ ಮೂಲಭೂತ ಸೌಕರ್ಯ, ಅಧ್ಯಾಪಕರ ಕಾರ್ಯ ಕ್ಷಮತೆ, ಅವರ ಸಂಶೋಧನಾ ಮನೋಭಾವದ ಮೇಲೆ ಕೇಂದ್ರಿಕರಿಸಿ ಉನ್ನತ ಶಿಕ್ಷಣವನ್ನು ಬಲಪಡಿಸುತ್ತದೆ. ಇದು ಎಬಿಸಿ ಆದಾರದ ಮೇಲೆ ಗ್ರೇಡ್ ಕೊಡುವ ಮೂಲಕ ಸಂಸ್ಥೆಯ ಮೌಲ್ಯಮಾಪನ ಮಾಡುತ್ತದೆ ವೈದ್ಯಕೀಯ ಕಾಲೇಜು ಗ್ರೇಡ್ ನೀಡುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಪುಣೆಯ ನ್ಯಾಕ್ ಯುಜಿಸಿ ಕಮೀಟಿ ಸದಸ್ಯರು ಶಿಕ್ಷಣ ತಜ್ಞರಾದ ಡಾ.ಎನ್ ಎಸ್ ಧರ್ಮಾಧಿಕಾರಿ, ಬೀದರ್ ಕರ್ನಾಟಕ ಕಾಲೇಜು ಐಕ್ಯುಎಸಿ ಕೋರ್ಡಿನೇಟರ್ ಡಾ.ರಾಜಮೋಹನ ಪರದೇಶಿ, ಕಾಲೇಜಿನ ಪ್ರಾಚಾರ್ಯರಾದ ಡಾ.ಜಯಶ್ರೀ ಮುದ್ದಾ, ಉಪ ಪ್ರಾಚಾರ್ಯರಾದ ಡಾ.ವೀರೆಂದ್ರ ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಂಸ್ಥೆಯ 12 ಅಂಶಗಳ ಕಾರ್ಯಕ್ರಮ ಯೋಜನಾಧಿಕಾರಿ ಡಾ.ಉಮಾ ರೇವೂರ ವಂದಿಸಿದರು, ಡಾ.ಪ್ರಶಾಂತ್ ಕುಮಾರ್ ನಿರೂಪಿಸಿದರು.