ವಿರಾಜಪೇಟೆ: ರಸ್ತೆ ಅಪಘಾತಕ್ಕೆ ಶಿಕ್ಷಕಿ ಬಲಿ
Update: 2024-09-26 06:05 GMT
ಮಡಿಕೇರಿ, ಸೆ.26: ಹುಣಸೂರಿನ ಬನ್ನಿಕುಪ್ಪೆ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಶಿಕ್ಷಕಿ ಕ್ರಿಸ್ಟಲಿನೊ(50) ಮೃತಪಟ್ಟಿದ್ದಾರೆ.
ಬುಧವಾರ ತಮ್ಮ ಪುತ್ರನನ್ನು ಮೈಸೂರಿನ ಕಾಲೇಜಿಗೆ ಸೇರಿಸಿ ಪತಿಯೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಮರಳುತ್ತಿದ್ದ ಸಂದರ್ಭ ಬನ್ನಿಕುಪ್ಪೆ ಬಳಿ ಬೊಲೆರೋ ವಾಹನ ಢಿಕ್ಕಿಯಾಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಸ್ಟಲಿನೊರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕ್ರಿಸ್ಟಲಿನೊ ಅವರು ವಿರಾಜಪೇಟೆ ಬೇಟೋಳಿ ನಿವಾಸಿ ಸೆಬಾಸ್ಟಿನ್ ಅವರ ಪತ್ನಿ.
ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.