ಗಾಂಧಿವಾದವೇ ಈ ದೇಶದ ಮನುವಾದ, ಸನಾತನವಾದ: ನಟ ಚೇತನ್ ಅಹಿಂಸಾ

Update: 2024-01-07 17:53 GMT

ಮೈಸೂರು: ಮೈಸೂರು: ಗಾಂಧಿವಾದಿಗಳೇ ಮೀಸಲಾತಿ ವಿರೋಧಿಗಳು, ಗಾಂಧಿವಾದವೇ ಈ ದೇಶದ ಮನುವಾದ, ಸನಾತನವಾದ, ಬ್ರಾಹ್ಮಣ್ಯವಾದ ಎಂದು ನಟ ಅಹಿಂಸ ಚೇತನ್ ಪ್ರತಿಪಾದಿಸಿದರು.

ಗಾಂಧಿವಾದಿಗಳೇ ಮೀಸಲಾತಿ ವಿರೋಧಿಗಳು, ಗಾಂಧಿವಾದವೇ ಬ್ರಾಹ್ಮಣವಾದ ಎಂದು ಪ್ರಗತಿಪರ ಚಿಂತಕ ನಟ ಚೇತನ್ ಅಹಿಂಸ ಪ್ರತಿಪಾದಿಸಿದ್ದಾರೆ.

ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಂಜನಗೂಡು ನಗರದ ಅಂಬೇಡ್ಕರ್ ಭವನದ ಹೊರ ಆವರಣದಲ್ಲಿ ರವಿವಾರ ಆಯೋಜಿಸಿದ್ದ ಭೀಮಾ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ‘ಸ್ವಾಭಿಮಾನದ ನಡಿಗೆ ಪ್ರಬುದ್ಧ ಭಾರತದ ಕಡೆಗೆ’ ಬೃಹತ್ ಸಮಾವೇಶ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ದೇಶದ ಬುದ್ಧಿ ಜೀವಿಗಳು ಚಿಂತಕರು, ಮನುವಾದ, ಸನಾತನವಾದದ ಬಗ್ಗೆ ವಿರೋಧ ಮಾಡುತ್ತಾರೆ. ಆದರೆ ಮನುವಾದ ಸನಾತನವಾದ ಎಂದರೆ ಏನು ಎಂದು ಹೇಳುವುದಿಲ್ಲ. ಗಾಂಧಿವಾದವೇ ಸನಾತನವಾದ, ಆಧುನಿಕ ಮನುವಾದ, ಬ್ರಾಹ್ಮಣವಾದ ಎಂದ ಅವರು, ಗಾಂಧಿವಾದ ಮತ್ತು ಅಂಬೇಡ್ಕರ್‌ವಾದ ಒಟ್ಟಿಗೆ ಹೋಗಲು ಸಾಧ್ಯವಿಲ್ಲ, ಒಟ್ಟಿಗೆ ಹೋದರೆ ಗಾಂಧಿವಾದ ಮೇಲೇಳುತ್ತದೆ. ಹಾಗಾಗಿಯೇ ವೈದಿಕ ಶಾಹಿಗಳು ಗಾಂಧಿವಾದವನ್ನು ಹೆಚ್ಚು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಾರೆ ಎಂದು ಕಿಡಿಕಾರಿದರು.

ವೈದಿಕ ಶಾಹಿಗಳು ಇಲ್ಲಿನ ಸಾಂಸ್ಕೃತಿಕ ಇತಿಹಾಸವನ್ನು ಮುಚ್ಚಿಹಾಕುವ ಕೆಲಸವನ್ನು ಮಾಡಿದ್ದಾರೆ. ಭೀಮಾ ಕೋರೆಂಗಾವ್ ಯುದ್ಧ ನಡೆದು ಮಹಾರ್ ಸೈನಿಕರ ಶೌರ್ಯ, ಬಲಿದಾನವನ್ನು ಮುಚ್ಚಿಹಾಕಿದ್ದರು. ಅದನ್ನು ಅಂಬೇಡ್ಕರ್ ಅವರು ಹುಡುಕಿ ಹೊರತೆರೆದು. ಹಾಗಾಗಿ ಭೀಮಾ ಕೋರೆಂಗಾವ್ ಘಟನೆ ಹೊರ ಬಂತು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಊಟಿ ರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಭೀಮಾ ಕೋರೆಂಗಾವ್ ವಿಜಯೋತ್ಸವದ ಮೆರವಣಿಗೆ ರಾಷ್ಟ್ರಪತಿ ರಸ್ತೆ ಮೂಲಕ ಹಾದು, ರಾಕ್ಷಸ ಮಂಟಪ ವೃತ್ತ, ದೇವಸ್ಥಾನದ ರಸ್ತೆ, ಮಾರುಕಟ್ಟೆ ರಸ್ತೆ ಮೂಲಕ ಅಂಬೇಡ್ಕರ್ ಭವನ ತಲುಪಿತು.

ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮೆರವಣಿಗೆಗೆ ಚಾಲನೆ ನೀಡಿದರು. ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿ ಅಭಿನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಚುಂಚನಹಳ್ಳಿ ಮಲ್ಲೇಶ್, ಮೆಲ್ಲಹಳ್ಳಿ ನಾರಾಯಣ, ಕಾರ್ಯ ಬಸವಣ್ಣ, ಶಂಕರಪುರ ಸುರೇಶ್, ನಗರ್ಲೆ ವಿಜಯಕುಮಾರ್, ಪ್ರಶಾಂತ್, ಸಾಹಿತಿ ಹಗಿನವಾಳು ಚಿಕ್ಕಣ್ಣ ಸೇರಿದಂತೆ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News