ಸ್ನೇಹಮಯಿ ಕೃಷ್ಣ ಗಡಿಪಾರಿಗೆ ಎಂ.ಲಕ್ಷ್ಮಣ್ ದೂರು ; ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯ

Update: 2024-08-30 16:53 GMT

 ಎಂ.ಲಕ್ಷ್ಮಣ್

ಮೈಸೂರು : ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಒಬ್ಬ ರೌಡಿ ಶೀಟರ್, ಬ್ಲಾಕ್‌ಮೇಲರ್ ಎಂದು ಆರೋಪಿಸಿ, ಅವರ ಮೇಲೆ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಸ್ನೇಹಮಯಿ ಕೃಷ್ಣ ವಿರುದ್ಧ ನಗರ ವ್ಯಾಪ್ತಿಯಲ್ಲಿ 17 ಕ್ರಿಮಿನಲ್ ಪ್ರಕರಣಗಳಿದ್ದು, ರಾಜ್ಯದ ಇತರೆ ಭಾಗಗಳಲ್ಲೂ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ಈತ ಪ್ರಮುಖವಾಗಿ ಭೂ ವಿವಾದಗಳನ್ನು ಸೃಷ್ಟಿಸಿ, ಅಮಾಯಕ ಭೂ ಮಾಲೀಕರ ಆಸ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ, ಕಾನೂನು ಬಾಹಿರವಾಗಿ ಹೆದರಿಸಿದ್ದಾರೆ. ಭೂಮಿ ವಶಪಡಿಸಿಕೊಳ್ಳುವುದು, ಪ್ರಾಣ ಭಯ ಹುಟ್ಟಿಸಿ ಓಡಿಸುವುದು ಈತನ ಕೆಲಸವಾಗಿದೆ. ಇದಕ್ಕೆ ಸ್ನೇಹಮಯಿ ಕೃಷ್ಣ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿರುವುದೇ ಸಾಕ್ಷಿ ಎಂದು ಲಕ್ಷ್ಮಣ್ ದೂರಿನಲ್ಲಿ ಹೇಳಿದ್ದಾರೆ.

ಮೈಸೂರಿನ ಜನರ ಹಿತದೃಷ್ಟಿಯಿಂದ ಹಾಗೂ ಪ್ರಮುಖವಾಗಿ ಸ್ನೇಹಮಯಿ ಕೃಷ್ಣರಿಂದ ನನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ಅವರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ, ಅವರನ್ನು ಗಡಿಪಾರುಮಾಡಬೇಕೆಂದು ಲಕ್ಷ್ಮಣ್ ದೂರಿನಲ್ಲಿ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News