ತಲೆಮಾರುಗಳು ನಿರೀಕ್ಷಿಸಿದ್ದನ್ನು 17 ನೇ ಲೋಕಸಭೆಯು ಸಾಧಿಸಿದೆ : ಪ್ರಧಾನಿ ನರೇಂದ್ರ ಮೋದಿ

Update: 2024-02-10 13:06 GMT

ನರೇಂದ್ರ ಮೋದಿ / PHOTO: sansad tv

ಹೊಸದಿಲ್ಲಿ: “17 ನೇ ಲೋಕಸಭೆಯು ತಲೆಮಾರುಗಳು ನಿರೀಕ್ಷಿಸಿದ್ದನ್ನು ಸಾಧಿಸಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಸಾರ್ವತ್ರಿಕ ಚುನಾವಣೆಗಿಂತ ಮುಂಚಿನ ಕೊನೆಯ ಅಧಿವೇಶನದ ವಿಶೇಷ ಭಾಷಣದಲ್ಲಿ ಹೇಳಿದ್ದಾರೆ ಎಂದು ndtv ವರದಿ ಮಾಡಿದೆ.

"ಅನೇಕ ಸುಧಾರಣೆಗಳು ಈ ವರ್ಷದಲ್ಲಿ ಸಂಭವಿಸಿದವು. ದೇಶವು ಬದಲಾವಣೆಯತ್ತ ಸಾಗುತ್ತಿದೆ" ಎಂದ ಪ್ರಧಾನಿ ಸಂವಿಧಾನದ 370 ರ ವಿಧಿ ರದ್ದತಿಯಿಂದ ಜಿ 20 ಸಭೆಯವರೆಗೆ ಅನೇಕ ಸಮಸ್ಯೆಗಳನ್ನು ಉಲ್ಲೇಖಿಸಿದರು. "ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕಿದ್ದು ಭಾರತಕ್ಕೆ ದೊಡ್ಡ ಗೌರವ. ಆ ಮೂಲಕ ದೇಶದ ಪ್ರತಿಯೊಂದು ರಾಜ್ಯವೂ, ಭಾರತದ ಸಾಮರ್ಥ್ಯ ಮತ್ತು ತನ್ನದೇ ಆದ ಗುರುತನ್ನು ವಿಶ್ವದ ಮುಂದೆ ಪ್ರದರ್ಶಿಸಿದೆ. ಇದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯಲಿದೆ" ಎಂದರು.

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಬಲಿಷ್ಠ ಭಾರತಕ್ಕೆ ಅಡಿಪಾಯ ಹಾಕುವ ಅನೇಕ ಸುಧಾರಣೆಗಳು ನಡೆದಿವೆ. ತ್ರಿವಳಿ ತಲಾಖ್ ಗೆ ತಿದ್ದುಪಡಿ ಮಾಡುವ ನಿರ್ಧಾರ ಸೇರಿದಂತೆ ಮತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕಾರವು ತಮ್ಮ ಸರಕಾರ ತೆಗೆದುಕೊಂಡು ಮಹತ್ವದ ನಿರ್ಧಾರ” ಎಂದು ಹೇಳಿದರು.

"ನಾವು ಭಯೋತ್ಪಾದನೆಯ ವಿರುದ್ಧ ಕಠಿಣ ಕಾನೂನುಗಳನ್ನು ಮಾಡಿದ್ದೇವೆ. ಇದು ಭಾರತವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುತ್ತದೆ. ವಿಧಿ 370ರ ರದ್ದತಿಯಿಂದ, ಜಮ್ಮು ಮತ್ತು ಕಾಶ್ಮೀರದ ಜನರಿಗೆ ಈಗ ನ್ಯಾಯ ಸಿಗುತ್ತದೆ. ತಲೆಮಾರುಗಳು ದೀರ್ಘಕಾಲದಿಂದ ಕಾಯುತ್ತಿದ್ದ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂವಿಧಾನವನ್ನು ರಚಿಸಿದವರು ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News