ಗುಜರಾತ್| ಕಾರಿನೊಳಗೆ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಮೃತ್ಯು

Update: 2024-11-04 11:45 GMT

ಸಾಂದರ್ಭಿಕ ಚಿತ್ರ 

ಗುಜರಾತ್: ಅಮ್ರೇಲಿ ಜಿಲ್ಲೆಯಲ್ಲಿ ಕಾರಿನೊಳಗೆ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮ್ರೇಲಿ ಜಿಲ್ಲೆಯ ರಂಧಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಧ್ಯಪ್ರದೇಶದ ಧಾರ್ನ ಕಾರ್ಮಿಕ ದಂಪತಿಯ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಚಿರಾಗ್ ದೇಸಾಯಿ ತಿಳಿಸಿದ್ದಾರೆ.

ಕಾರ್ಮಿಕ ದಂಪತಿ ತಮ್ಮ ಮಕ್ಕಳನ್ನು ಬಿಟ್ಟು ಭರತ್ ಮಂದಾನಿ ಎಂಬುವವರ ಜಮೀನಿಗೆ ಕೆಲಸಕ್ಕೆ ತೆರಳಿದ್ದಾರೆ. ನಾಲ್ವರು ಮಕ್ಕಳು ಅಲ್ಲೇ ನಿಲ್ಲಿಸಿದ್ದ ಜಮೀನಿನ ಮಾಲಕನ ಕಾರಿಗೆ ಹತ್ತಿ ಆಟವಾಡುತ್ತಿದ್ದರು. 2 ರಿಂದ 7 ವರ್ಷದೊಳಗಿನ ನಾಲ್ವರು ಮಕ್ಕಳು ಆಟವಾಡುವಾಗ ಕಾರಿನಲ್ಲಿ ಲಾಕ್ ಆಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂಜೆ ವೇಳೆ ಮಕ್ಕಳ ಪೋಷಕರು ಮತ್ತು ಕಾರು ಮಾಲಕ ಕೆಲಸ ಮುಗಿಸಿ ವಾಪಾಸ್ಸಾದಾಗ ಮಕ್ಕಳು ಕಾರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಮ್ರೇಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News