ವೈದ್ಯನಿಗೆ 64 ಲಕ್ಷ ರೂ. ವಂಚನೆ: ವಿದೇಶಾಂಗ ಸೇವೆ ಅಧಿಕಾರಿ ವಿರುದ್ಧ ಪ್ರಕರಣ

Update: 2024-09-28 02:26 GMT

ಸಾಂದರ್ಭಿಕ ಚಿತ್ರ (freepik)

ಲಕ್ನೋ: ಹೂಡಿಕೆ ನೆಪದಲ್ಲಿ ವೈದ್ಯರೊಬ್ಬರಿಗೆ 64 ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿ ಹಾಗೂ ಆಕೆಯ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನ್ಯಾಯಾಲಯದ ಆದೇಶ ಮೇರೆಗೆ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ರಾಜೇಶ್ ಕುಮಾರ್ ತ್ರಿಪಾಠಿ ಹೇಳಿದ್ದಾರೆ.

ಐಎಫ್ಎಸ್ ಅಧಿಕಾರಿ ನಿಹಾರಿಕಾ ಸಿಂಗ್ ಹಾಗೂ ಆಕೆಯ ಪಿ ಅಜಿತ್ ಗುಪ್ತಾ ಹಾಗೂ ಅವರ ಸಹ ಕಂಪನಿಗಳು 64,63,250 ರೂಪಾಯಿ ವಂಚಿಸಿದ್ದಾರೆ ಎಂದು ಡಾ.ಮೃದುಲಾ ಅಗರ್ವಾಲ್ ದೂರು ನೀಡಿದ್ದರು. ಈ ಅಧಿಕಾರಿ ಪ್ರಸ್ತುತ ಇಂಡೋನೇಷ್ಯಾದಲ್ಲಿ ಸೇವೆಯಲ್ಲಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

2020ರ ಫೆಬ್ರವರಿ 2ರಿಂದ 29ರ ನಡುವೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡಸಂಹಿತೆ ಸೆಕ್ಷನ್ 406 ಮತ್ತು 420ರ ಅನ್ವಯ ಪ್ರಕರಣ ದಾಖಲಾಗಿದೆ. ಅಜಿತ್ ಗುಪ್ತಾ, ಆಕೆಯ ಪತ್ನಿ ನಿಹಾರಿಕಾ ಸಿಂಗ್, ಅನಿ ಬುಲಿಯನ್ ಟ್ರೇಡರ್ಸ್ ಮತ್ತು ಐ ವಿಷನ್ ಇಂಡಿಯಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಿರುದ್ಧ ದೂರು ದಾಖಲಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News