JPNIC ಕೇಂದ್ರ ಪ್ರವೇಶಕ್ಕೆ ಅಖಿಲೇಶ್ ಯಾದವ್ ಗೆ ಅನುಮತಿ ನಿರಾಕರಣೆ; ಲಕ್ನೊದಾದ್ಯಂತ ಭಾರೀ ಪ್ರತಿಭಟನೆ
JPNIC ಕೇಂದ್ರ ಪ್ರವೇಶಕ್ಕೆ ಅಖಿಲೇಶ್ ಯಾದವ್ ಗೆ ಅನುಮತಿ ನಿರಾಕರಣೆ; ಲಕ್ನೊದಾದ್ಯಂತ ಭಾರೀ ಪ್ರತಿಭಟನೆ
ಲಕ್ನೊ: ನಾನು ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಕೇಂದ್ರ (JPNIC ಪ್ರವೇಶಿಸುವುದನ್ನು ತಡೆಯಲು ರಾಜ್ಯ ಸರಕಾರವು ಕೇಂದ್ರದ ಎದುರು ತಗಡು ತಡೆಗೋಡೆಯನ್ನು ನಿರ್ಮಿಸಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದು, ಇದರ ಬೆನ್ನಿಗೇ ಲಕ್ನೊದಾದ್ಯಂತ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇಂದು ನಡೆಯಲಿರುವ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನಾಚರಣೆಯ ಅಂಗವಾಗಿ ಅಖಿಲೇಶ್ ಯಾದವ್ ಅವರು ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಕೇಂದ್ರದ ಬಳಿ ಗುರುವಾರ ರಾತ್ರಿ ತೆರಳಿದ್ದರು.
ಅಖಿಲೇಶ್ ಯಾದವ್ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಅಖಿಲೇಶ್ ಯಾದವ್ ಕೃತ್ಯ ಬಾಲಿಶವಾಗಿದ್ದು, ಸಮಾಜವಾದಿ ಪಕ್ಷ ಫ್ಯೂಸ್ ಕಿತ್ತ ಟ್ರಾನ್ಸ್ ಫಾರ್ಮರ್ ನಂತಾಗಿದೆ ಎಂದು ಲೇವಡಿ ಮಾಡಿದೆ.
ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಕಾರ್ಯಕರ್ತರು ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಕೇಂದ್ರ ಪ್ರವೇಶಿಸದಂತೆ ತಡೆಯಲು ಅದರೆದುರು ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ನಡುವೆ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಕೇಂದ್ರದೆದುರು ನಿರ್ಮಿಸಲಾಗಿರುವ ತಗಡಿನ ತಡೆಗೋಡೆಯ ಮೇಲೆ ನಿಂತು ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗುರುವಾರ ರಾತ್ರಿ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲು ಬಂದಿದ್ದ ಅಖಿಲೇಶ್ ಯಾದವ್, “ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಕೇಂದ್ರದೆದುರು ತಗಡಿನ ತಡೆಗೋಡೆಯನ್ನು ನಿರ್ಮಿಸುವ ಮೂಲಕ ನನ್ನನ್ನು ಒಳ ಪ್ರವೇಶಿಸದಂತೆ ತಡೆಯಲು ರಾಜ್ಯ ಸರಕಾರ ಯತ್ನಿಸುತ್ತಿದೆ. ಅದನ್ನು ಜನರಿಂದ ಏನನ್ನು ಮರೆಮಾಚಲು ಪ್ರಯತ್ನಿಸುತ್ತಿದೆ? ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ಕೇಂದ್ರವನ್ನು ಮಾರಾಟ ಮಾಡುವ ಹುನ್ನಾರವೇನಾದರೂ ನಡೆಯುತ್ತಿದೆಯೆ?” ಎಂದು ಆರೋಪಿಸಿದ್ದರು.