ಆಲಂಗೋಡ್ ಲೀಲಾಕೃಷ್ಣನ್ ಅವರಿಗೆ 'ಅಲಿಫ್ ಮೀಮ್' ಪ್ರಶಸ್ತಿ

Update: 2023-10-05 09:28 GMT

Photo: Sirajlive

ವಯನಾಡ್: ಮರ್ಕಝ್ ನಾಲೆಡ್ಜ್ ಸಿಟಿ ಇದರ 'ವರ್ಲ್ಡ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಅಡ್ವಾನ್ಸ್ ಸೈನ್ಸ್' (ವಿರಾಸ್) ಮೀಮ್ ಕಾವ್ಯೋತ್ಸವದ ಅಂಗವಾಗಿ ಆಯೋಜಿಸಿರು ಮೂರನೇ ಅಲಿಫ್-ಮೀಮ್ ಕವನ ಪ್ರಶಸ್ತಿಗೆ ಆಲಂಕೋಟ್ ಲೀಲಾ ಕೃಷ್ಣನ್ ಆಯ್ಕೆಯಾಗಿದ್ದಾರೆ.

ಅಲ್ ಅಮೀನ್ ಎಂಬ ಕವಿತೆಗೆ ಈ ಪ್ರಶಸ್ತಿ ಒಲಿದಿದೆ. ವೀರಾನ್ ಕುಟ್ಟಿ, ಕೆಇಎನ್ ಮತ್ತು ಕೆಟಿ ಸೂಪಿ ಅವರನ್ನೊಳಗೊಂಡ ತೀರ್ಪುಗಾರರ ತಂಡವು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿಯು  25000 ರೂ. ನಗದು ಮತ್ತು ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ. ಪ್ರವಾದಿ ಮುಹಮ್ಮದ್ ಅವರ ಬಾಲ್ಯ, ಯೌವನ, ಗುಣ ಲಕ್ಷಣಗಳು ಮತ್ತು ವೈಯಕ್ತಿಕ ಜೀವನ ಮುಂತಾದ ವಿವಿಧ ವಿಷಯಗಳ ಕುರಿತು ಬರೆದ ಕವನಗಳ ಪೈಕಿ ಆಯ್ಕೆಯಾದ ಅತ್ಯುತ್ತಮ ಕವಿತೆಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಶನಿವಾರ ಮತ್ತು ರವಿವಾರ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮರ್ಕಝ್ ನಾಲೆಡ್ಜ್ ಸಿಟಿ ನಿರ್ದೇಶಕ ಡಾ. ಎ.ಪಿ.ಅಬ್ದುಲ್ ಹಕೀಂ ಅಝ್ಹರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 100 ಕವಿಗಳು ಮಲಯಾಳಂ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಕವನಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ, ಸುಭಾಷ್ ಚಂದ್ರನ್, ವೀರಾನ್ ಕುಟ್ಟಿ , ಕೆಇಎನ್, ಸೋಮನ್ ಕಡಲೂರು, ಕೆ.ಟಿ.ಸೂಪಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸಾಹಿತಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News