ವಿಕಿಪೀಡಿಯ ವಿರುದ್ಧ ರೂ. 2 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ANI ಸುದ್ದಿ ಸಂಸ್ಥೆ

Update: 2024-07-09 08:18 GMT

Photo:X/ANI

ಹೊಸದಿಲ್ಲಿ: ತನ್ನ ವಿರುದ್ಧ ಮಾನಹಾನಿಕಾರಕ ಮಾಹಿತಿಗಳನ್ನು ಒಳಗೊಂಡಿದೆ ಎಂದು ಆರೋಪಿಸಿ ಎಎನ್ಐ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ವಿಕಿಪೀಡಿಯ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ರೂ. 2 ಕೋಟಿ ಮಾನಹಾನಿ ಮಾನನಷ್ಟ ದಾಖಲಿಸಿದೆ.

ಮಧ್ಯಂತರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದ ಎಎನ್ಐ ಅರ್ಜಿಯ ಸಂಬಂಧ ವಿಕಿಪೀಡಿಯಾಗೆ ಸಮನ್ಸ್ ಜಾರಿಗೊಳಿಸಿರುವ ನ್ಯಾ. ನವೀನ್ ಚಾವ್ಲಾ, ಅರ್ಜಿಯನ್ನು ಆಗಸ್ಟ್ 20ರಂದು ವಿಚಾರಣೆಗೆ ಪಟ್ಟಿ ಮಾಡಿದ್ದಾರೆ.

ವಿಕಿಪೀಡಿಯ ತನ್ನ ವೇದಿಕೆಯಲ್ಲಿ ತನ್ನ ಸಂಸ್ಥೆಯ ವಿರುದ್ಧ ಮಾನಿಹಾನಿಕಾರಕ ಮಾಹಿತಿಗಳನ್ನು ಪ್ರಕಟಿಸುವುದರಿಂದ ದೂರ ಉಳಿಯಬೇಕು ಎಂದು ಕೋರಿ ಎಎನ್ಐ ಸುದ್ದಿ ಸಂಸ್ಥೆ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ತನ್ನ ಕುರಿತು ಪ್ರಕಟವಾಗಿರುವ ಮಾಹಿತಿಯನ್ನು ತೆಗೆದು ಹಾಕಬೇಕು ಹಾಗೂ ತನಗೆ ರೂ. 2 ಕೋಟಿ ಮಾನಹಾನಿ ಪರಿಹಾರ ನೀಡಬೇಕು ಎಂದು ಎಎನ್ಐ ಸುದ್ದಿ ಸಂಸ್ಥೆ ಅರ್ಜಿಯಲ್ಲಿ ಮನವಿ ಮಾಡಿದೆ.

"ಎಎನ್ಐ ಸುದ್ದಿ ಸಂಸ್ಥೆಯು ಆಡಳಿತಾರೂಢ ಕೇಂದ್ರ ಸರಕಾರದ ಕಾರ್ಯಸೂಚಿ ಪ್ರಚಾರದ ಸಾಧನವಾಗಿ ಬಳಕೆಯಾಗುತ್ತಿದೆ ಎಂಬ ಟೀಕೆಗಳಿವೆ. ನಕಲಿ ಸುದ್ದಿ ತಾಣಗಳ ಜಾಲಗಳಿಂದ ಸುದ್ದಿಗಳನ್ನು ಹಂಚುತ್ತದೆ ಹಾಗೂ ಘಟನೆಗಳನ್ನು ತಪ್ಪಾಗಿ ವರದಿ ಮಾಡುತ್ತದೆ ಎಂಬ ಆರೋಪಗಳಿವೆ" ಎಂದು ವಿಕಿಪೀಡಿಯ ಪುಟದಲ್ಲಿ ಮಾಹಿತಿ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News