ಇಂಡಿಯಾ ಬದಲಿಗೆ ಭಾರತ್ ಮರುನಾಮಕರಣ ಕೇವಲ ವದಂತಿ ಎಂದ ಅನುರಾಗ್ ಠಾಕೂರ್

Update: 2023-09-06 07:54 GMT

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಜಿ20 ನಾಯಕರಿಗೆ ಔತಣಕೂಟಕ್ಕೆ ನೀಡಿರುವ ಆಮಂತ್ರಣದಲ್ಲಿ ಸಾಂಪ್ರದಾಯಿಕ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂಬ ಪದದ ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂಬ ಪದವನ್ನು ಬಳಸಿರುವುದು ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವಾಗಲೇ ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ "ಈಗ ನಡೆಯುತ್ತಿರುವುದು ಕೇವಲ ವದಂತಿಗಳು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

'ಇಂಡಿಯಾ'ವನ್ನು 'ಭಾರತ' ಎಂದು ಅಧಿಕೃತವಾಗಿ ಮರುನಾಮಕರಣ ಮಾಡಲು ಮುಂಬರುವ ವಿಶೇಷ ಅಧಿವೇಶನವನ್ನು ಕರೆಯಲಾಗಿದೆಯೇ ಎಂದು The Indian Express ಕೇಳಿದ ಪ್ರಶ್ನೆಗೆ ಠಾಕೂರ್ ಈ ರೀತಿ ಪ್ರತಿಕ್ರಿಯಿಸಿದರು.

‘ಭಾರತ್ ಪದವನ್ನು ವಿರೋಧಿಸುವವರ ಮನಸ್ಥಿತಿಯನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ನಾನು ಹೇಳಲು ಬಯಸುತ್ತೇನೆ, ”ಎಂದು ಬಿಜೆಪಿ ನಾಯಕ ಹೇಳಿದರು.

ಠಾಕೂರ್ ಅವರ ಅರ್ಧ-ಸ್ಪಷ್ಟೀಕರಣಕ್ಕೂ ಮೊದಲು, ಬಿಜೆಪಿ ನಾಯಕರು 'ಭಾರತ್' ಪದ ಬಳಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರೂ ‘ಪ್ರೆಸಿಡೆಂಟ್ ಆಫ್ ಭಾರತ್’ ಆಹ್ವಾನವನ್ನು ವಿವಿಧ ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News