ಮಣಿಪುರ: ಶಸ್ತ್ರಸಜ್ಜಿತ ಗುಂಪಿನಿಂದ ಅಪಹರಿಸಲ್ಪಟ್ಟ ಪೊಲೀಸ್‌ ಅಧಿಕಾರಿಯನ್ನು ಕೆಲವೇ ಗಂಟೆಗಳಲ್ಲಿ ರಕ್ಷಿಸಿದ ಭದ್ರತಾ ಪಡೆ

Update: 2024-02-28 07:46 GMT

ಸಾಂದರ್ಭಿಕ ಚಿತ್ರ (PTI)

ಇಂಫಾಲ್:‌ ಮಣಿಪುರದ ಪೂರ್ವ ಇಂಫಾಲ್‌ನಲ್ಲಿರುವ ವಾಂಗಖೇಯಿ ಎಂಬಲ್ಲಿ ಮಂಗಳವಾರ ಸಂಜೆ ಎಎಸ್‌ಪಿ ಒಬ್ಬರ ನಿವಾಸದ ಮೇಲೆ ಮೀಟಿ ತೀವ್ರಗಾಮಿ ಗುಂಪು ಆರಂಬೈ ತೆಂಗ್ಗೊಲ್‌ನ ಸುಮಾರು 200 ಸದಸ್ಯರೆಂದು ತಿಳಿಯಲ್ಪಟ್ಟ ಜನರು ಗುಂಡಿನ ದಾಳಿ ನಡೆಸಿ ಪೊಲೀಸ್‌ ಅಧಿಕಾರಿಯನ್ನು ಅಪಹರಿಸಿದ್ದಾರೆ. ಆದರೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ಅಪಹೃತ ಅಧಿಕಾರಿಯನ್ನು ರಕ್ಷಿಸಿದ್ದಾರೆ.

ಆದರೆ ನಂತರ ಪರಿಸ್ಥಿತಿ ನಿಯಂತ್ರಣ ಮೀರಿದ್ದರಿಂದ ರಾಜ್ಯ ಸರ್ಕಾರ ಸೇನೆಯ ಸಹಾಯ ಕೋರಿದೆ.

ಸಂಜೆ ಸುಮಾರು 7 ಗಂಟೆಗೆ ನಡೆದ ಈ ಘಟನೆಯ ವೇಳೆ ದಾಳಿಕೋರರು ಮನೆಯಲ್ಲಿ ದಾಂಧಲೆ ನಡೆಸಿ ಕನಿಷ್ಠ ನಾಲ್ಕು ವಾಹನಗಳಿಗೆ ಹಾನಿಯುಂಟು ಮಾಡಿದ್ದಾರೆ.

ರಕ್ಷಿಸಲ್ಪಟ್ಟ ಅಧಿಕಾರಿ ಅಮಿತ್‌ ಕುಮಾರ್‌ ಅವರು ಮಣಿಪುರ ಪೊಲೀಸರ ಆಪರೇಷನ್ಸ್‌ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ವಾಹನ ಕಳವು ಪ್ರಕರಣವೊಂದರಲ್ಲಿ ಎಎಸ್‌ಪಿ ಅಮಿತ್‌ ಕುಮಾರ್‌ ಅವರು ತೀವ್ರಗಾಮಿ ಮೈತೈ ಗುಂಪಿನ ಆರು ಸದಸ್ಯರನ್ನು ಬಂಧಿಸಿದ್ದರೆಂಬ ಕಾರಣಕ್ಕೆ ಈ ದಾಳಿ ನಡೆದಿದೆ. ಬಂಧನದ ಬೆನ್ನಲ್ಲೇ ಮೈತೈ ಮಹಿಳೆಯರ ಸಂಘಟನೆ ಮೀರಾ ಪೈಬಿಸ್‌ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News