ಮೊದಲ ಮಳೆಗೇ ಸೋರತೊಡಗಿದ ರಾಮಮಂದಿರದ ಛಾವಣಿ!
Update: 2024-06-24 15:48 GMT
ಅಯೋಧ್ಯೆ: ಮೊದಲ ಮಳೆಯಾದ ನಂತರ ರಾಮಮಂದಿರದ ಛಾವಣಿ ಸೋರತೊಡಗಿದೆ ಎಂದು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ ಎಂದು abplive.com ವರದಿ ಮಾಡಿದೆ.
ಇದಕ್ಕೂ ಮುನ್ನವೇ ರಾಮಮಂದಿರದ ಗರ್ಭಗುಡಿಯಲ್ಲಿ ಸೋರಿಕೆಯಾಗುತ್ತಿರುವ ಸಂಗತಿ ಸಾಮಾಜಿಕ ಮಾಧ್ಯಮಗಳಲ್ಲಿ ಬಯಲಾಗಿತ್ತು. ಇದೀಗ ರಾಮಮಂದಿರದ ಮಾಳಿಗೆಯೂ ಸೋರತೊಡಗಿರುವುದರಿಂದ ರಾಮಮಂದಿರ ನಿರ್ಮಾಣ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗತೊಡಗಿದೆ.
ಈ ಕುರಿತು ಕ್ರಮ ಹಾಗೂ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಪ್ರಧಾನ ಅರ್ಚಕರು, ರಾಮ ಮಂದಿರ ನಿರ್ಮಾಣದ ಗುಣಮಟ್ಟದ ಕುರಿತು ಪ್ರಶ್ನೆ ಎತ್ತಿದ್ದಾರೆ. 2025ರ ವೇಳೆಗೆ ರಾಮ ಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವುದು ಅಸಾಧ್ಯ. ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿರುವ ಮೇಲ್ಭಾಗದಿಂದಲೇ ಮೊದಲ ಮಳೆಯ ನಂತರ ನೀರು ಸೋರಿಕೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.