ಬಿಜೆಪಿ ದೊಡ್ಡ ಗೆಲುವು ಸಾಧಿಸುತ್ತಾದರೂ, ಅದರಲ್ಲಿ ಮೋದಿಯ ಯಾವುದೇ ಮ್ಯಾಜಿಕ್ ಇರುವುದಿಲ್ಲ: ಸುಬ್ರಮಣಿಯನ್ ಸ್ವಾಮಿ

Update: 2024-02-25 14:47 GMT

ಸುಬ್ರಮಣಿಯನ್ ಸ್ವಾಮಿ ( Photo: PTI)

ಪಾಟ್ನಾ: ಹೆಚ್ಚಿತ್ತಿರುವ ʼಹಿಂದೂ ಹೆಮ್ಮೆʼ ಭಾವನೆಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯವು ಮತ್ತಷ್ಟು ಉಜ್ವಲವಾಗುವ ಸಾಧ್ಯತೆ ಇದ್ದು, ಇದರ ಹಿಂದೆ ಮೋದಿಯ ಯಾವುದೇ ಪವಾಡವಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾತೃ ಸಂಸ್ಥೆಯಾದ ಆರೆಸ್ಸೆಸ್‌ ನಲ್ಲಿ ಯಾವುದೇ ವ್ಯಕ್ತಿಗೆ ಹೆಚ್ಚು ಬೆಲೆ ನೀಡುವುದಕ್ಕಿಂತ ಸಂಘಟನೆ ಹಾಗೂ ಸಿದ್ಧಾಂತಕ್ಕೆ ಹೆಚ್ಚು ಬೆಲೆ ನೀಡಲಾಗುತ್ತದೆ ಎಂದು ಪಾಟ್ನಾದಲ್ಲಿ ಆಯೋಜಿಸಲಾಗಿರುವ ಕಾನೂನು ಸಮ್ಮೇಳನವೊಂದರಲ್ಲಿ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

"ಹಿಂದೂಗಳು ಇದೇ ಪ್ರಥಮ ಬಾರಿಗೆ ತಮ್ಮ ಅಸ್ಮಿತೆ ಬಗ್ಗೆ ಹೆಮ್ಮೆ ಪಡುತ್ತಿರುವುದರಿಂದ ಬಿಜೆಪಿಯು ತನ್ನ ಹಿಂದಿನ ಸಾಧನೆಯನ್ನು ಹಿಂದಿಕ್ಕಲಿದೆ ಎಂದು ನಾನೂ ಭಾವಿಸಿದ್ದೇನೆ. ನೆಹರೂ ಅವಧಿಯಲ್ಲಿ ಒಳಗಾಗಿದ್ದ ಕೀಳರಿಮೆಗೆ ಅವರು ಮತ್ತೆಂದೂ ಒಳಗಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

"ಈ ಬದಲಾವಣೆಯು ತಮ್ಮಿಂದಲೇ ಆಗಿದೆ ಎಂದು ಕೆಲವರು ಭಾವಿಸಬಹುದು. ಅಂತಹ ಸಂಗತಿಗಳಿಗೆ ನಾವು ಮಹತ್ವ ನೀಡಬೇಕಾದ ಅಗತ್ಯವಿಲ್ಲ. ಇಲ್ಲಿ ಯಾವುದೇ ಮೋದಿ ಪವಾಡವಿದೆ ಎಂದು ನನಗನ್ನಿಸುತ್ತಿಲ್ಲ. ಬಿಜೆಪಿ-ಆರೆಸ್ಸೆಸ್ ನಲ್ಲಿ ವ್ಯಕ್ತಿಗಳನ್ನು ಪೀಠದಲ್ಲಿ ಕೂರಿಸುವ ಸಂಸ್ಕೃತಿಯಿಲ್ಲ. ಅದೇನಿದ್ದರೂ ಕಾಂಗ್ರೆಸ್ ಸಂಸ್ಕೃತಿಯಾಗಿದೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News