ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ

Update: 2024-03-12 18:06 IST
ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕಾರ

Photo : PTI 

  • whatsapp icon

ಚಂಡೀಗಡ : ಬಿಜೆಪಿಯ ನಯಾಬ್ ಸಿಂಗ್ ಸೈನಿ ಅವರು ಮಂಗಳವಾರ ಸಂಜೆ ಚಂಡೀಗಢದಲ್ಲಿ ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಂಗಳವಾರ ಬೆಳಿಗ್ಗೆ ಮನೋಹರ್ ಲಾಲ್ ಖಟ್ಟರ್ ಸಂಪುಟ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಸೈನಿ ಅವರ ಜೊತೆಗೆ, ಬಿಜೆಪಿಯ ಜೆಪಿ ದಲಾಲ್, ಮೂಲಚಂದ್ ಶರ್ಮಾ, ಬನ್ವಾರಿ ಲಾಲ್ ಮತ್ತು ಕನ್ವರ್ ಪಾಲ್ ಗುರ್ಜರ್ ಮತ್ತು ಸ್ವತಂತ್ರ ಶಾಸಕ ರಂಜಿತ್ ಸಿಂಗ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸರಕಾರಕ್ಕೆ ಆರು ಪಕ್ಷೇತ್ರರ ಶಾಸಕರ ಬೆಂಬಲವಿದೆ. 90 ಸದಸ್ಯ ಬಲದ ಸದನದಲ್ಲಿ ಬಿಜೆಪಿ 41 ಶಾಸಕರನ್ನು ಹೊಂದಿದ್ದು, ಸರಳ ಬಹುಮತಕ್ಕೆ 46 ಸದಸ್ಯರ ಬೆಂಬಲ ಬೇಕು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News