‌ಕೇಂದ್ರ ಬಜೆಟ್| ಯಾವುದು ಅಗ್ಗ? ಯಾವುದು ದುಬಾರಿ?; ಇಲ್ಲಿದೆ ಮಾಹಿತಿ...

Update: 2024-07-23 13:52 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಇಂದು ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಕ್ಯಾನ್ಸರ್‌ ಔಷಧಿಗಳು ಮತ್ತು ಮೊಬೈಲ್‌ ಫೋನ್‌ಗಳ ಮೇಲಿನ ಕಸ್ಟಮ್ಸ್‌ ಸುಂಕದಲ್ಲಿ ಗಣನೀಯ ಇಳಿಕೆ ಘೋಷಿಸಲಾಗಿದ್ದು, ಇದು ರಿಟೇಲ್‌ ಮಾರುಕಟ್ಟೆಯಲ್ಲಿ ಅವುಗಳ ಬೆಲೆಗಳನ್ನು ಕಡಿಮೆಗೊಳಿಸಲಿದೆ.

ಆಮದಿತ ಚಿನ್ನ, ಬೆಳ್ಳಿ, ಚರ್ಮದ ಉತ್ಪನ್ನಗಳು ಮತ್ತು ಸಮುದ್ರಾಹಾರ ಕೂಡ ಅಗ್ಗವಾಗಲಿವೆ.

“ಇನ್ನೂ ಮೂರು ಕ್ಯಾನ್ಸರ್‌ ಔಷಧಿಗಳಿಗೆ ಸರ್ಕಾರ ಕಸ್ಟಮ್ಸ್‌ ಸುಂಕದಿಂದ ವಿನಾಯಿತಿ ನೀಡಲಿದೆ. ಮೊಬೈಲ್‌ ಫೋನ್‌ ಹೊರತಾಗಿ ಚಾರ್ಜರ್‌ಗಳು ಮತ್ತು ಇತರ ಮೊಬೈಲ್‌ ಬಿಡಿಭಾಗಗಳ ಮೇಲಿನ ಸುಂಕದಲ್ಲಿ ಇಳಿಕೆಯಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಚಿನ್ನ ಮತ್ತು ಬೆಳ್ಳಿಯ ಆಮದು ಸುಂಕ ಶೇ.6ರಷ್ಟು ಕಡಿಮೆಯಾಗಲಿದೆ ಇದು ರಿಟೇಲ್‌ ಬೇಡಿಕೆ ಹೆಚ್ಚಿಸಲಿದೆ ಹಾಗೂ ಚಿನ್ನದ ಕಳ್ಳಸಾಗಣಿಕೆಯನ್ನೂ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಸಚಿವೆ ಹೇಳಿದ್ದಾರೆ.

ಅಮೋನಿಯಂ ನೈಟ್ರೇಟ್‌ ಮೇಲಿನ ಕಸ್ಟಮ್ಸ್‌ ಸುಂಕವನ್ನು ಸರ್ಕಾರ ಶೇ10ರಷ್ಟು ಏರಿಕೆ ಮಾಡಲಿದ್ದು, ಬಯೋಡಿಗ್ರೇಡೇಬಲ್‌ ಅಲ್ಲದ ಪ್ಲಾಸ್ಟಿಕ್‌ಗಳ ಮೇಲಿನ ಸುಂಕವನ್ನು ಶೇ 25ರಷ್ಟು ಏರಿಕೆ ಮಾಡಲಿದೆ.

ಯಾವುದು ಅಗ್ಗ

ಮೊಬೈಲ್‌ ಫೋನ್‌ಗಳು, ಚಾರ್ಜರ್‌ಗಳ ಮೇಲಿನ ಸುಂಕ ಶೇ.15ಕ್ಕೆ ಕಡಿತ

ಚಿನ್ನ ಹಾಗೂ ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ.6ಕ್ಕೆ ಹಾಗೂ ಪ್ಲಾಟಿನಂನ ಕಸ್ಟಮ್ಸ್ ತೆರಿಗೆ ಶೇ.6.4ಕ್ಕೆ ಇಳಿಕೆ.

ಮೂರು ಕ್ಯಾನ್ಸರ್ ಚಿಕಿತ್ಸಾ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ.

ಈ ಕಾಮರ್ಸ್ ಮೇಲಿನ ಟಿಡಿಸ್‌‌ ದರ ಶೇ.1ರಿಂದ ಶೇ.0.1ಕ್ಕೆ ಇಳಿಕೆ.

ಫೆರೋನಿಕೆಲ್ ಹಾಗೂ ಬ್ಲಿಸ್ಟರ್ ತಾಮ್ರದ ಮೂಲ ಕಸ್ಟಮ್ಸ್ ಸುಂಕ ರದ್ದು

25 ಪ್ರಮುಖ ಕನಿಜಗಳ ಮೇಲಿನ ಅಬಕಾರಿ ಸುಂಕಕ್ಕೆ ಸಂಪೂರ್ಣ ವಿನಾಯಿತಿ.

ಸಿಗಡಿ ಹಾಗೂ ಮೀನಿನ ಮೇಲಿನ ಕಸ್ಟಮ್ಸ್ ಸುಂಕದಲ್ಲಿ ಶೇ.5ರಷ್ಟು ಇಳಿಕೆ

ಚರ್ಮದ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕದಲ್ಲಿ ಇಳಿಕೆ

ಯಾವುದು ದುಬಾರಿ

ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಮೂಲ ಕಸ್ಟಮ್ಸ್ ಸುಂಕ ಶೇ.10ರಿಂದ ಶೇ.15ಕ್ಕೆ ಏರಿಕೆ

ಪ್ಲಾಸ್ಟಿಕ್ ಉತ್ಪನ್ನಗಳ ಕಸ್ಯಮ್ಸ್ ಸುಂಕ

ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ಸ್ ಸುಂಕ ಶೇ.7.5ರಿಂದ ಶೇ.10ಕ್ಕೇರಿಕೆ

ಆಮದಿತ ಗಾರ್ಡನ್ ಕೊಡೆಗಳು

ಲ್ಯಾಬೋರೇಟರಿ ರಾಸಾಯನಿಕಗಳು

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News