ಚಂದ್ರಯಾನ-3: ಬಾಹ್ಯಾಕಾಶ ನೌಕೆ ಕಳುಹಿಸಿದ ಪ್ರಥಮ ಚಿತ್ರಗಳ ನೋಟ..

Update: 2023-08-07 02:42 GMT

Photo: twitter.com/chandrayaan_3

ಚಂದ್ರಯಾನ-3 ಬಾಹ್ಯಾಕಾಶ ನೌಕೆ ಕಳುಹಿಸಿದ ಪ್ರಥಮ ಚಿತ್ರಗಳ ನೋಟ..

ಹೊಸದಿಲ್ಲಿ: ಚಂದ್ರಯಾನ-3 ಬಾಹ್ಯಾಕಾಶ ನೌಕೆ ಕಳುಹಿಸಿದ ಚಂದ್ರನ ಮೊಟ್ಟಮೊದಲ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ಬಿಡುಗಡೆ ಮಾಡಿದೆ.

ಶನಿವಾರ ಚಂದ್ರನ ಕಕ್ಷೆಗೆ ಲಗ್ಗೆ ಇಟ್ಟ ಬಳಿಕ ಚಂದ್ರಯಾನ-3 ಚಂದ್ರನ ಕುಳಿಗಳು ಇರುವ ಮೇಲ್ಮೈ ಚಿತ್ರವನ್ನು ಸೆರೆ ಹಿಡಿದಿತ್ತು. "ಚಂದ್ರನ ಕಕ್ಷಗೆ ಲಗ್ಗೆ ಇಡುವ ಸಂದರ್ಭದಲ್ಲಿ 2023ರ ಆಗಸ್ಟ್ 5ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಕಂಡಂತೆ ಚಂದ್ರನ ನೋಟ" ಎಂದು ಮಿಷನ್‍ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಿಂದ ಟ್ವೀಟ್ ಮಾಡಲಾಗಿದೆ.

ಈ ಮಿಷನ್ ಇದುವರೆಗೆ ಸರಾಗವಾಗಿ ಸಾಗುತ್ತಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಈ ತಿಂಗಳ 23ರಂದು ಸುಲಲಿತವಾಗಿ ಇಳಿಯಲಿದೆ ಎಂಬ ನಿರೀಕ್ಷೆಯನ್ನು ಇಸ್ರೋ ಹೊಂದಿದೆ.

ಶನಿವಾರ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. 41 ದಿನಗಳ ಪಯಣ ಆರಂಭಿಸಿದ 22 ದಿನಗಳಲ್ಲಿ ಕಕ್ಷೆಯನ್ನು ಪ್ರವೇಶಿಸಿದ್ದು, ಇದುವರೆಗೆ ಯಾವುದೇ ದೇಶದ ಬಾಹ್ಯಾಕಾಶ ನೌಕೆ ಇಳಿಯದ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಯುವ ನಿರೀಕ್ಷೆ ಇದೆ.

600 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆಯಡಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸಲಾಗಿದ್ದು, ಇದು ದೊಡ್ಡ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News