ಕಮರೆಡ್ಡಿ : ಕೆಸಿಆರ್, ರೇವಂತ್ ರೆಡ್ಡಿ ಸೋಲಿಸಿದ ವೆಂಕಟ ರಮಣ ರೆಡ್ಡಿ
ಹೈದರಾಬಾದ್ : ಜಿದ್ದಾಜಿದ್ದಿನ ಕಣವಾಗಿದ್ದ ತೆಲಂಗಾಣದ ಕಮರೆಡ್ಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ 6,741 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅವರಿಗೆ ಒಟ್ಟು 66,652 ಮತ ಚಲಾವಣೆಯಾಗಿತ್ತು.
ಹಾಲಿ ಸಿಎಂ ಕೆ ಚಂದ್ರಶೇಖರ ರಾವ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರನ್ನು ಸೋಲಿಸಿದ ವೆಂಕಟರಮಣ ರೆಡ್ಡಿ ಅವರು ಕಮರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೆವಿಆರ್ ಎಂದೇ ಜನಪ್ರಿಯರಾಗಿರುವ ಕಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ತೆಲಂಗಾಣದ ಪ್ರತಿಷ್ಠಿತ ಕಮರೆಡ್ಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಮುಖ್ಯಮಂತ್ರಿ, ಬಿಆರ್ಎಸ್ ವರಿಷ್ಠ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಹಾಗೂ ರಾಜ್ಯ ಕಾಂಗ್ರೆಸ್ ವರಿಷ್ಠ ಎ. ರೇವಂತ ರೆಡ್ಡಿ ಸ್ಪರ್ಧಿಸಿದ್ದ ವಿಧಾನಸಭಾ ಕ್ಷೇತ್ರವಾಗಿದೆ.
ಕಾಂಗ್ರೆಸ್ ನ ಜಯ ಕೆಸಿಆರ್ ಮುಖ್ಯಮಂತ್ರಿ ಸ್ಥಾನ ತ್ಯಜಿಸುವಂತೆ ಮಾಡಿದೆ. ಕಾಂಗ್ರೆಸ್ ರೇವಂತ್ ರೆಡ್ಡಿ ನೇತೃತ್ವದಲ್ಲಿ ಮುಂದಿನ ಸರಕಾರವನ್ನು ರಚಿಸುವ ಸಾಧ್ಯತೆ ಇದೆ.