ಹುಟ್ಟುಹಬ್ಬಕ್ಕೆ ಜೀವಂತ ಹಾವನ್ನು ಕೊರಳಿಗೆ ಧರಿಸಿ ಬಂದ ಶಾಸಕ!

Update: 2023-09-09 13:12 GMT

Photo credit: indiatoday.in

ಭೋಪಾಲ್: ಮಧ್ಯಪ್ರದೇಶದ ಶಿಯೋಪುರದ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ತನ್ನ ಬೆಂಬಲಿಗರು ನೀಡುವ ಸಾಂಪ್ರದಾಯಿಕ ಹೂಮಾಲೆಗಳನ್ನು ಸ್ವೀಕರಿಸಲು ನಿರಾಕರಿಸಿದ ಬಾಬು ಜಂಡೆಲ್ ಅವರು ತಮ್ಮ ಕುತ್ತಿಗೆಗೆ ಜೀವಂತ ಹಾವನ್ನು ಸುತ್ತಿಕೊಂಡಿದ್ದಾರೆ..

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಬಾಬು ಜಂಡೆಲ್ ಅವರು ಹಾವನ್ನು ಕೊರಳಿಗೆ ಸುತ್ತಿಕೊಂಡು ತಮ್ಮ ಬೆಂಬಲಿಗರನ್ನು ಸ್ವಾಗತಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅವರು ಹೂಮಾಲೆಗಳನ್ನು ಧರಿಸಲು ನಿರಾಕರಿಸುತ್ತಿರುವ ವಿಡಿಯೋ ಕೂಡಾ ವೈರಲ್‌ ಆಗಿದೆ.

ಇತ್ತೀಚೆಗಷ್ಟೇ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಪ್ರವಾಹ ವಿಚಾರವಾಗಿ ತಮ್ಮ ಬಟ್ಟೆ ಹರಿದು ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ವಿದ್ಯುತ್ ಸರಬರಾಜು ಮಾಡಲು ಆಗ್ರಹಿಸಿ ವಿದ್ಯುತ್ ಕಂಬ ಏರಿದ್ದರು.

ಕೆಲವೊಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಾಯಕರಾಗಿಯೂ, ಕೆಲವೊಮ್ಮೆ ನೃತ್ಯಗಾರರಾಗಿಯೂ ಮಾಧ್ಯಮಗಳ ಗಮನ ಸೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News