ಈಶಾನ್ಯ ದಿಲ್ಲಿ ಹಿಂಸಾಚಾರ: 3 ಆರೋಪಿಗಳನ್ನು ಖುಲಾಸೆಗೊಳಿಸಿದ ದಿಲ್ಲಿ ಕೋರ್ಟ್‌

Update: 2023-08-18 12:18 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ದಿಲ್ಲಿಯ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ ಹಾಗೂ ದಿಲ್ಲಿ ಪೊಲೀಸರ ತನಿಖಾಧಿಕಾರಿ “ಸಾಕ್ಷ್ಯಗಳನ್ನು ತಿರುಚಿ” “ಪೂರ್ವಯೋಜಿತವಾಗಿ ಮತ್ತು ಯಾಂತ್ರಿಕವಾಗಿ” ಚಾರ್ಜ್‌ಶೀಟ್‌ ಸಲ್ಲಿಸಿರಬೇಕೆಂದು ಶಂಕಿಸಿದೆ.

ಪ್ರಕರಣವನ್ನು ದಿಲ್ಲಿ ಪೊಲೀಸರಿಗೆ ಮರಳಿ ಕಳಿಸಿರುವ ಸುಪ್ರೀಂ ಕೋರ್ಟ್‌, ತನಿಖೆಯನ್ನು ಪರಾಮರ್ಶಿಸುವಂತೆ ಹೇಳಿದೆ ಹಾಗೂ ಎಲ್ಲಾ ದೂರುಗಳಿಗೆ ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಸೂಚಿಸಿದೆ.

ಈ ನಿರ್ದಿಷ್ಟ ಪ್ರಕರಣದಲ್ಲಿ ಖಲಾಸೆಗೊಂಡ ಮೂವರನ್ನು ಅಕಿಲ್‌ ಅಹ್ಮದ್‌ ಅಲಿಯಾಸ್‌ ಪಾಪಡ್‌, ರಹೀಶ್‌ ಖಾನ್‌ ಮತ್ತು ಇರ್ಷಾದ್‌ ಎಂದು ಗುರುತಿಸಲಾಗಿದೆ. ಇವರು ಅಕ್ರಮ ಕೂಟ ಕಟ್ಟಿಕೊಂಡು ಗಲಭೆ, ದಾಂಧಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು.

ಚಾರ್ಜ್‌ಶೀಟ್‌ನಲ್ಲಿ ಹಲವು ವೈರುಧ್ಯಗಳನ್ನು ಕೋರ್ಟ್‌ ಗಣನೆಗೆ ತೆಗೆದುಕೊಂಡಿದೆ ಎಂದು ನ್ಯಾಯಾಲಯ ಕಂಡುಕೊಂಡಿದೆ.

ಈ ಮೂವರ ವಿರುದ್ಧ ಮೊದಲು ಜುಲೈ 14, 2020 ರಂದು ಚಾರ್ಜ್‌ಶೀಟ್‌ ಸಲ್ಲಿಸಲಾಗಿದ್ದರೆ ನಂತರ ಫೆಬ್ರವರಿ 15, 16, 2022ರಂದು ಪೂರಕ ಚಾರ್ಜ್‌ಶೀಟ್‌ಗಳನ್ನು ಕೆಲ ಹೊಸ ದಾಖಲೆಗಳು ಹಾಗೂ ಹೇಳಿಕೆಗಳೊಂದಿಗೆ ಸಲ್ಲಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News