ಸಿಯುಇಟಿ-ಯುಜಿ ದಿನಾಂಕ ಬದಲಾಗುವ ಸಾಧ್ಯತೆ : ಯುಜಿಸಿ

Update: 2024-03-03 15:22 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಲೋಕಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಅವಲಂಬಿಸಿ ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ (ಸಿಯುಇಟಿ)-ಯುಜಿ ದಿನಾಂಕಗಳು ಬದಲಾಗುವ ಸಾಧ್ಯತೆಯಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಜಗದೀಶ ಕುಮಾರ ಅವರು ರವಿವಾರ ತಿಳಿಸಿದರು.

ಮೇ 15ರಿಂದ ಮೇ 31ರವರೆಗೆ ಪರೀಕ್ಷೆಗಳು ನಡೆಯಲಿವೆ ಮತ್ತು ಜೂ.30ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಮಂಗಳವಾರ ಪ್ರಕಟಿಸಿತ್ತು.

ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿ ಈ ತಿಂಗಳು ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಎನ್ಟಿಎ ಪ್ರಕಟಿಸಿರುವ ದಿನಾಂಕಗಳು ತಾತ್ಕಾಲಿಕವಾಗಿವೆ. ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಎನ್ಟಿಎ ಸಿಯುಇಟಿ-ಯುಜಿ ದಿನಾಂಕಗಳನ್ನು ಅಂತಿಮಗೊಳಿಸಲಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕುಮಾರ ತಿಳಿಸಿದರು.

ಸಿಯುಇಟಿ-ಯುಜಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಂಗಳವಾರದಿಂದ ಆರಂಭಗೊಂಡಿದ್ದು, ಮಾ.26ಕ್ಕೆ ಅಂತ್ಯಗೊಳ್ಳಲಿದೆ.

2022ರಲ್ಲಿ ಪರಿಚಯಿಸಲಾದ ಸಿಯುಇಟಿ-ಯುಜಿ ದೇಶಾದ್ಯಂತ ಯಾವುದೇ ಕೇಂದ್ರೀಯ ವಿವಿಗಳಲ್ಲಿ ಅಥವಾ ರಾಜ್ಯ, ಡೀಮ್ಡ್ ಮತ್ತು ಖಾಸಗಿ ವಿವಿಗಳು ಸೇರಿದಂತೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಬಯಸುವ ವಿದ್ಯಾರ್ಥಿಗಳಿಗೆ ಏಕ-ಗವಾಕ್ಷಿ ಅವಕಾಶವನ್ನು ಒದಗಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News