ಮಾನ ಹಾನಿ ಪ್ರಕರಣ | ಸಿ.ಎಂ. ಆತಿಶಿ ವಿರುದ್ಧದ ಸಮನ್ಸ್ ರದ್ದುಗೊಳಿಸಿದ ದಿಲ್ಲಿ ನ್ಯಾಯಾಲಯ

Update: 2025-01-28 20:48 IST
Photo of  Atishi

ಸಿಎಂ ಆತಿಶಿ | PC : PTI 

  • whatsapp icon

ಹೊಸದಿಲ್ಲಿ: ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್ ದಾಖಲಿಸಿದ ಮಾನ ಹಾನಿ ಪ್ರಕರಣದಲ್ಲಿ ಮುಖ್ಯಮಂತ್ರಿ ಆತಿಶಿ ಅವರ ವಿರುದ್ಧ ಜಾರಿಗೊಳಿಸಲಾಗಿದ್ದ ಸಮನ್ಸ್ ಅನ್ನು ದಿಲ್ಲಿ ನ್ಯಾಯಾಲಯ ಮಂಗಳವಾರ ರದ್ದುಗೊಳಿಸಿದೆ.

ಈ ಹಿಂದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತನ್ನ ವಿರುದ್ಧ ಜಾರಿ ಮಾಡಿದ್ದ ಸಮನ್ಸ್ ಅನ್ನು ಪ್ರಶ್ನಿಸಿ ಆತಿಶಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ಈ ಆದೇಶ ನೀಡಿದರು.

ಆತಿಶಿ ಅವರ ಹೇಳಿಕೆ ತನ್ನ ಗೌರವಕ್ಕೆ ಧಕ್ಕೆ ತಂದಿದೆ ಎಂದು ಪ್ರತಿಪಾದಿಸಿ ಪ್ರವೀಣ್ ಶಂಕರ್ ಕಪೂರ್ ಅವರು ಆತಿಶಿ ಅವರ ವಿರುದ್ಧ ದಾಖಲಿಸಿದ ಮಾನ ಹಾನಿ ದೂರು ಈ ಪ್ರಕರಣಕ್ಕೆ ಮೂಲವಾಗಿದೆ.

ಆದರೆ, ಬಿಜೆಪಿಯನ್ನು ಉದ್ದೇಶಿಸಿ ಮಾನ ಹಾನಿ ಹೇಳಿಕೆ ನೀಡಲಾಗಿದೆ. ಕಪೂರ್ ಅವರ ವಿರುದ್ಧ ಮಾನ ಹಾನಿ ಹೇಳಿಕೆ ನೀಡಿಲ್ಲ ಎಂದು ಆತಿಶಿ ಅವರ ನ್ಯಾಯವಾದಿ ಪ್ರತಿಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News