ದಿಲ್ಲಿ: ಮಂಜಿನ ವಾತಾವರಣ, 30 ವಿಮಾನಗಳ ಸಂಚಾರ ವಿಳಂಬ

Update: 2024-01-16 15:47 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ : ದಿಲ್ಲಿಯಲ್ಲಿ ಮಂಜು ಮುಸುಕಿದ ವಾತಾವರಣ ಮಂಗಳವಾರ ಕೂಡ ಮುಂದುವರಿದಿದೆ. ಇದರಿಂದಾಗಿ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 30 ವಿಮಾನಗಳು ವಿಳಂಬವಾಗಿ ನಿರ್ಗಮಿಸಿದವು.

ಕಡಿಮೆ ದೃಗ್ಗೋಚರತೆಯ ಕಾರಣದಿಂದ ಒಟ್ಟು 17 ವಿಮಾನಗಳ ಸಂಚಾರ ರದ್ದುಪಡಿಸಲಾಗಿತ್ತು. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಲವು ಗಂಟೆಗಳ ಕಾಲ ಸಿಲುಕಿಕೊಂಡರು.

ಪಾಲಂ ಹಾಗೂ ಸಫ್ದರ್‌ಜಂಗ್ ವಿಮಾನ ನಿಲ್ದಾಣಗಳಲ್ಲಿ ಮಂಗಳವಾರ ಬೆಳಗ್ಗೆ 5.30ಕ್ಕೆ 500 ಮೀಟರ್ ಒಳಗೆ ದೃಗ್ಗೋಚರ ದಾಖಲಾಗಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ದಿಲ್ಲಿಗೆ ತೆರಳುತ್ತಿರುವ 30 ರೈಲುಗಳ ಸಂಚಾರದಲ್ಲಿ ಬುಧವಾರ ಬೆಳಗ್ಗೆ ವ್ಯತ್ಯಯ ಉಂಟಾಯಿತು.

ಸೋಮವಾರ 5 ವಿಮಾನಗಳ ಪಥ ಬದಲಾಯಿಸಲಾಗಿತ್ತು. ದಿಲ್ಲಿ ವಿಮಾನ ನಿಲ್ದಾಣದಲ್ಲಿ 100ಕ್ಕೂ ಅಧಿಕ ವಿಮಾನಗಳು ವಿಳಂಬವಾಗಿ ಸಂಚರಿಸಿದ್ದವು. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News