ದಿಲ್ಲಿಯಲ್ಲಿ ಪ್ರಸಕ್ತ ಚಳಿಗಾಲದ ಕನಿಷ್ಠ ತಾಪಮಾನ ದಾಖಲು
Update: 2024-12-11 17:00 GMT
ಹೊಸದಿಲ್ಲಿ: ದಿಲ್ಲಿಯ ಜನರು ಬುಧವಾರ ಬೆಳಿಗ್ಗೆ ಮೈಕೊರೆಯುವ ಚಳಿಯೊಂದಿಗೆ ಎದ್ದಿದ್ದರು. ಮಂಗಳವಾರ 8 ಡಿ.ಸೆ.ಇದ್ದ ಕನಿಷ್ಠ ತಾಪಮಾನ ಬುಧವಾರ 4.9 ಡಿ.ಸೆ.ಗೆ ಕುಸಿದಿದ್ದು,ಇದು ಈ ಚಳಿಗಾಲದಲ್ಲಿ ಇದುವರೆಗಿನ
ಕನಿಷ್ಠ ತಾಪಮಾನವಾಗಿದೆ.
ದಿಲ್ಲಿಯ ಸಫ್ದರ್‌ಜಂಗ್‌ನಲ್ಲಿ 4.9 ಡಿ.ಸೆ.ತಾಪಮಾನ ದಾಖಲಾಗಿದೆ. ಕಳೆದ ವರ್ಷದ ಡಿ.15ರಂದು ಇಷ್ಟೇ ಕನಿಷ್ಠ ತಾಪಮಾನ ದಾಖಲಾಗಿತ್ತು. ಡಿ.ಸೆ.1930,ಡಿ.27ರಂದು ದಾಖಲಾಗಿದ್ದ ಶೂನ್ಯ ಡಿ.ಸೆ. ಸಫ್ದರ್‌ಜಂಗ್‌ನಲ್ಲಿ ಈವರೆಗಿನ ಕನಿಷ್ಠ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
ಬೆಳಿಗ್ಗೆ 8:30 ಗಂಟೆಗೆ ಸಾಪೇಕ್ಷ ಆರ್ದ್ರತೆಯ ಮಟ್ಟವು ಶೇ.64ರಷ್ಟಿತ್ತು.
ದಿಲ್ಲಿಯಲ್ಲಿ ಬುಧವಾರ ವಾಯು ಗುಣಮಟ್ಟವು ‘ಕಳಪೆ’ ವರ್ಗದಲ್ಲಿಯೇ ಮುಂದುವರಿದಿತ್ತು. ಮಂಗಳವಾರ 223ರಷ್ಟಿದ್ದ ಎಕ್ಯೂಐ ಬುಧವಾರ ಬೆಳಿಗ್ಗೆ 207ಕ್ಕೆ ಕುಸಿದಿತ್ತು