ಫೇಸ್ ಬುಕ್ ನಲ್ಲಿ '@highlight' ಹ್ಯಾಕ್ ಗೆ ಬಲಿಯಾಗಬೇಡಿ; ನಿಮ್ಮ ಪ್ರೊಫೈಲ್ ಗೆ ಯಾರು ಭೇಟಿ ನೀಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ...
ಹೊಸದಿಲ್ಲಿ: ನಿಮ್ಮ ಫೇಸ್ ಬುಕ್ ಪ್ರೊಫೈಲ್ ಅನ್ನು ಯಾರು ನೋಡುತ್ತಾರೆ ಎಂಬ ಬಗ್ಗೆ ಕುತೂಹಲವಿದೆಯೇ? ಸಾಮಾಜಿಕ ಮಾಧ್ಯಮಗಳನ್ನು ನಂಬುವುದಾದರೆ ನಿಮ್ಮ ಪ್ರೊಫೈಲ್ ಗೆ ಯಾರು ಭೇಟಿ ನೀಡುತ್ತಾರೆ ಅಥವಾ ಪರಿಶೀಲಿಸುತ್ತಾರೆ ಎನ್ನುವುದರ ಮೇಲೆ ನಿಗಾ ಇರಿಸಲು ಈಗ ಮಾರ್ಗವೊಂದಿದೆ.
‘‘ಕಮೆಂಟ್ಸ್ ಗಳಲ್ಲಿ '@' ಎಂದು ಟೈಪ್ ಮಾಡಿ ಮತ್ತು ಮೇಲಿನಿಂದ ಕಾಣಿಸಿಕೊಳ್ಳುವ 'highlight'ನ ಮೇಲೆ ಕ್ಲಿಕ್ ಮಾಡಿ,ತನ್ಮೂಲಕ ನಿಮ್ಮ ಪ್ರೊಫೈಲ್ ಅನ್ನು ಯಾವಾಗಲೂ ಪರಿಶೀಲಿಸುವ ಜನರನ್ನು ನೀವು ನೋಡಬಹುದು’’ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹ್ಯಾಕ್ ಆಗಿದೆ.
ಈ ಹ್ಯಾಕ್ ನ ಬೆನ್ನತ್ತಿದ indiatoday.in ಸುದ್ದಿಸಂಸ್ಥೆಗೆ ಯಾರದೇ ಪ್ರೊಫೈಲ್ ಗೆ ಯಾರು ಭೇಟಿ ನೀಡುತ್ತಾರೆ ಎನ್ನುವುದನ್ನು ಪರಿಶೀಲಿಸಲು ಫೇಸ್ ಬುಕ್ ನಲ್ಲಿ ಯಾವುದೇ ವಿಧಾನವು ಅವಕಾಶ ನೀಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
Photo: indiatoday.in
ಏನಾಗುತ್ತದೆ?
ಮೊದಲಿಗೆ ವೈರಲ್ ಪೋಸ್ಟ್ ನ ಕಮೆಂಟ್ ಬಾಕ್ಸ್ ನಲ್ಲಿ '@' ಎಂದು ಟೈಪ್ ಮಾಡಿದಾಗ ನಾವು ಫೇಸ್ ಬುಕ್ ನಲ್ಲಿ ಸಂವಹನ ನಡೆಸುವ ಸ್ನೇಹಿತರ ಪಟ್ಟಿಯು ಕಾಣಿಸಿಕೊಳ್ಳುತ್ತದೆ. ಪಟ್ಟಿಯಲ್ಲಿ ಮೊದಲ ಹೆಸರು ಈ ಹೇಳಿಕೆಯನ್ನು(ಹ್ಯಾಕ್ ನಲ್ಲಿಯ) ಪೋಸ್ಟ್ ಮಾಡಿದ ವ್ಯಕ್ತಿಯದ್ದಾಗಿರುತ್ತದೆ.
ಈ ವಿಷಯದಲ್ಲಿ ಹೆಚ್ಚಿನ ಹುಡುಕಾಟಗಳು ವೆಬ್ಸೈಟ್ ನ ಗೋಪ್ಯತೆ ನೀತಿಯಲ್ಲಿನ ಫೇಸ್ ಬುಕ್ ನ ಅಧಿಕೃತ ನಿರಾಕರಣೆಗೆ ಕೊಂಡೊಯ್ದಿದ್ದವು. ‘ಜನರು ತಮ್ಮ ಪೊಫೈಲ್ ಅನ್ನು ಯಾರು ನೋಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಫೇಸ್ಬುಕ್ ಅನುಮತಿಸುವುದಿಲ್ಲ. ಮೂರನೇ ಪಾರ್ಟಿಯ ಆ್ಯಪ್ ಗಳು ಸಹ ಇದನ್ನು ಸಾಧ್ಯವಾಗಿಸುವುದಿಲ್ಲ. ಈ ಸಾಮರ್ಥ್ಯವನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಆ್ಯಪ್ ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ಅದನ್ನು ನಮಗೆ ವರದಿ ಮಾಡಿ ’ ಎಂದು ಈ ಅಧಿಕೃತ ನಿರಾಕರಣೆಯು ಹೇಳುತ್ತದೆ.
Photo: indiatoday.in
ನಾವು '@highlight'ಎಂದು ಟೈಪಿಸಿದರೆ ಏನಾಗುತ್ತದೆ?
ಕೆನಡಾದಲ್ಲಿ ನೆಲೆಸಿರುವ ಸಾಫ್ಟ್ವೇರ್ ಇಂಜಿನಿಯರ್, ಮೆಟಾದ ಮಾಜಿ ಉದ್ಯೋಗಿ ಸತ್ಯಂ ಧರ್ ಅವರನ್ನು indiatoday.in ಸುದ್ದಿಸಂಸ್ಥೆಯು ಸಂಪರ್ಕಿಸಿತ್ತು.
ಈ ವೈಶಿಷ್ಟ್ಯವು ಯಾವುದೇ ವಿಷಯವನ್ನು,ಅದನ್ನು ಯಾರೇ ಶೇರ್ ಮಾಡಿಕೊಂಡಿದ್ದರೂ,ತಮ್ಮ ಸ್ನೇಹಿತರಿಗೆ ಹೈಲೈಟ್ ಮಾಡಲು ಬಳಕೆದಾರರಿಗೆ ಸಾಧ್ಯವಾಗಿಸುತ್ತದೆ. ಯಾವುದೇ ಪೋಸ್ಟ್ ನ ಕಮೆಂಟ್ಸ್ ನಲ್ಲಿ '@highlight' ಎಂದು ಟೈಪಿಸಿದರೆ ಈ ಕಮೆಂಟ್ ಅನ್ನು ಪೋಸ್ಟ್ ಮಾಡಿದ ಬಳಕೆದಾರನ ಸ್ನೇಹಿತರಿಗೆ ನೋಟಿಫಿಕೇಶನ್ ರವಾನೆಯಾಗುತ್ತದೆ. ಯಾವುದೇ ಬಳಕೆದಾರ @friends ಅಥವಾ @everyone ನಂತಹ ಕಮೆಂಟ್ ಗಳನ್ನು ಪೋಸ್ಟ್ ಮಾಡಿದಾಗಲೂ ಇದೇ ಸಂಭವಿಸುತ್ತದೆ ಎಂದು ಧರ್ ವಿವರಿಸಿದರು.
ವೈರಲ್ ಆಗಿರುವ ಹ್ಯಾಕ್ ಕುರಿತು ಪ್ರಶ್ನೆಗೆ ಧರ್, ಮೆಟಾದ ಗೋಪ್ಯತೆ ನೀತಿಯು ಬಳಕೆದಾರರು ತಮ್ಮ ಪ್ರೊಫೈಲ್ ಸಂದರ್ಶಕರನ್ನು ಪರಿಶೀಲಿಸಲು ಅನುಮತಿಸುವುದಿಲ್ಲ ಎಂದು ಉತ್ತರಿಸಿದರು.
Photo: indiatoday.in
ಹೀಗಾಗಿ ಯಾವುದೇ ಹ್ಯಾಕ್ ಗಳು ಫೇಸ್ ಬುಕ್ ಬಳಕೆದಾರರಿಗೆ ತಮ್ಮ ಪ್ರೊಫೈಲ್ ಗೆ ಯಾರು ಭೇಟಿ ನೀಡುತ್ತಾರೆ ಎನ್ನುವುದನ್ನು ಪರಿಶೀಲಿಸಲು ಸಾಧ್ಯವಾಗಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.