ಉತ್ತರ ಪ್ರದೇಶ ಪೊಲೀಸರ ʼUPCOPʼ ಆ್ಯಪ್ ಪ್ರಕಾರ ಡ್ರಗ್ ಸ್ಮಗ್ಲಿಂಗ್, ಕಳ್ಳ ಸಾಗಣಿಕೆ ವೃತ್ತಿಯಂತೆ!
Update: 2024-04-23 17:25 GMT
ಲಕ್ನೋ : ಉತ್ತರ ಪ್ರದೇಶ ಪೊಲೀಸರ ʼUPCOPʼ ಆ್ಯಪ್ ನ ಬಾಡಿಗೆದಾರರ ವೃತ್ತಿ ಮಾಹಿತಿ ವಿಭಾಗದಲ್ಲಿ 'ಡ್ರಗ್ ಸ್ಮಗ್ಲರ್', 'ಭಿಕ್ಷುಕ', ʼಜುಗಾರಿʼ , ʼಕಳ್ಳ ಸಾಗಣೆದಾರʼ ಇತ್ಯಾದಿಗಳನ್ನು ವೃತ್ತಿ ಎಂದು ಪಟ್ಟಿ ಮಾಡಲಾಗಿದೆ ಎಂದು Times of India ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಯುಪಿ ಪೋಲಿಸರು ಪಟ್ಟಿ ಮಾಡಿರುವ ವೃತ್ತಿಯನ್ನು ಕಂಡು ವ್ಯಂಗ್ಯವಾಡಿದ್ದಾರೆ. ಕೆಲವು ಎಕ್ಸ್ ಬಳಕೆದಾರರು ಅದನ್ನು ಅಧಿಕಾರಿಗಳ ಗಮನಕ್ಕೆ ತರಲು ತಮ್ಮ ಖಾತೆಗಳಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಈ ಪ್ರಮಾದವನ್ನು ಗಮನಿಸಿ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಯುಪಿ ಪೋಲೀಸ್ ಅಪ್ಲಿಕೇಶನ್‌ನಲ್ಲಿ ಮಾಲಿಕರು ಬಾಡಿಗೆ ನೀಡುವಾಗ, ಬಾಡಿಗೆದಾರರ ಹಿನ್ನೆಲೆ ಪರಿಶೀಲನೆಗೆ ʼUPCOPʼ ಆ್ಯಪ್ ಬಳಸುತ್ತಾರೆ.