ಝಾಕಿರ್ ಹುಸೈನ್ ನಿಧನ; ದೃಢಪಡಿಸಿದ ಕುಟುಂಬಸ್ಥರು

Update: 2024-12-16 05:16 GMT

file photo

ಹೊಸದಲ್ಲಿ: ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೊದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಬಲಾ ಮಾಂತ್ರಿಕ ಝಾಕಿರ್ ಹುಸೇನ್ ಕೊನೆಯುಸಿರೆಳೆದಿರುವುದನ್ನು ಸೋಮವಾರ ಕುಟುಂಬ ದೃಢಪಡಿಸಿದೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಐಡಿಯೊಪಥಿಕ್ ಪಲ್ಮನರಿ ಫಿಬ್ರೋಸಿಸ್ ಸಮಸ್ಯೆಯಿಂದ ಹುಸೇನ್ ಮೃತಪಟ್ಟಿದ್ದಾರೆ ಎಂದು ಕುಟುಂಬ ಸ್ಪಷ್ಟಪಡಿಸಿದೆ. ಎರಡು ವಾರ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರ ದೇಹಸ್ಥಿತಿ ವಿಷಮಿಸಿದ್ದರಿಂದ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳು, ಚಿತ್ರತಾರೆಯರು ಸೇರಿದಂತೆ ಅಸಂಖ್ಯಾತ ಮಂದಿ, ತಬಲಾ ಮಾಂತ್ರಿಕನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

"ಶ್ರೇಷ್ಠ ತಬಲಾ ವಾದಕ ಝಾಕೀರ್ ಹುಸೇನ್ ನಿಧನದ ಸುದ್ದಿ ತೀರಾ ಆಘಾತ ತಂದಿದೆ. ಅವರ ನಿಧನ ಸಂಗೀತ ಜಗತ್ತಿಗೆ ತುಂಬಲಾರದ ನಷ್ಟ. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದೇನೆ. ಈ ಶ್ರೇಷ್ಠ ಕಲೆಯ ಪರಂಪರೆಯನ್ನು ಉಳಿಸಿ ಹೋಗಿರುವ ಉಸ್ತಾನ್ ಝಾಕಿರ್ ಹುಸೇನ್ ನಮ್ಮ ಸ್ಮøತಿಪಟಲದಲ್ಲಿ ಸದಾ ಜೀವಂತವಿರುತ್ತಾರೆ" ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ಎಕ್ಸ್ ಪೋಸ್ಟ್‍ನಲ್ಲಿ ಬಣ್ಣಿಸಿದ್ದಾರೆ.

ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ, ಕೇಂದ್ರ ಸಂಪರ್ಕ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಮಹೀಂದ್ರಾ & ಮಹೀಂದ್ರಾ ಉದ್ಯಮ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ಆರ್‍ಪಿಜಿ ಎಂಟರ್‍ಪ್ರೈಸಸ್ ಅಧ್ಯಕ್ಷ ಹರ್ಷ ಗೋಯೆಂಕಾ ಸೇರಿದಂತೆ ಹಲವು ಮಂದಿ ಗಣ್ಯರು ಕಂಬನಿ ಮಿಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News