ಜಗತ್ತಿನಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ | ಲಾಗಿನ್ ಮಾಡಲಾಗದೇ ಪರದಾಡುತ್ತಿರುವ ಬಳಕೆದಾರರು
Update: 2024-03-05 16:31 GMT
ಹೊಸದಿಲ್ಲಿ : ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಮಂಗಳವಾರ ಸರ್ವರ್ ಡೌನ್ ಸಮಸ್ಯೆ ಅನುಭವಿಸಿದೆ ಎಂದು ವರದಿಯಾಗಿದೆ. ಇದರಿಂದಾಗಿ ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ. ಜಗತ್ತಿನಾದ್ಯಂತ ಬಳಕೆದಾರರು ತಮ್ಮ Facebook ಪ್ರೊಫೈಲ್‌ಗಳನ್ನು ಪ್ರವೇಶಿಸಲಾಗದೇ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ವರದಿ ಮಾಡಿದ್ದಾರೆ.