ಸಾರ್ವತ್ರಿಕ ಚುನಾವಣೆ | ದೇಶದಲ್ಲಿ 96.88 ಕೋಟಿ ಮತದಾರರು : ಚುನಾವಣಾ ಆಯೋಗ

Update: 2024-02-09 13:12 GMT

ಸಾಂದರ್ಭಿಕ ಚಿತ್ರ | Photo: PTI 

ಹೊಸದಿಲ್ಲಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ದೇಶದ 96.88 ಕೋಟಿ ಮತದಾರರು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.

18 ರಿಂದ 29 ವರ್ಷದೊಳಗಿನ ಎರಡು ಕೋಟಿಗೂ ಹೆಚ್ಚು ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆಯೋಗ ಹೇಳಿದೆ. ಕಳೆದ ಲೋಕಸಭಾ ಚುನಾವಣೆಯ ಬಳಿಕ ನೋಂದಾಯಿತ ಮತದಾರರಲ್ಲಿ ಆರು ಶೇಕಡಾ ಹೆಚ್ಚಳವಾಗಿದೆ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕರಡು ಪಟ್ಟಿ ಸಿದ್ದಪಡಿಸುತ್ತಿದ್ದ ವೇಳೆ 95,73,52,077 ಇದ್ದ ಮತದಾರರ ಸಂಖ್ಯೆಯು, ಅಂತಿಮ ಪಟ್ಟಿಯ ವೇಳೆ 96,88,21,926 ಗೆ ಹೆಚ್ಚಳ ವಾಗಿದೆ. ಈ ಪೈಕಿ 49,72,31,994 ಮಂದಿ ಪುರುಷ ಮತದಾರರು, 47,15,41,888 ಮಂದಿ ಮಹಿಳೆಯರಿದ್ದಾರೆ ಎಂದು ಆಯೋಗ ಪ್ರಕಟಿಸಿದೆ.

48,044 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಮತಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ಒಟ್ಟು 88,35,449 ಅಂಗವಿಕಲ ಮತದಾರರು ನೋಂದಾಯಿಸಿದ್ದಾರೆ. 18ರಿಂದ 19ರ ವಯಸ್ಸಿನ 1,84,81,610 ಮಂದಿ, 20-29 ವಯಸ್ಸಿನ 19,74,37,160 ಮಂದಿ, 80ಕ್ಕಿಂತ ಮೇಲ್ಪಟ್ಟ ವಯಸ್ಸಿನ 1,85,92,918 ಮಂದಿ ಮತದಾರರು ನೋಂದಾಯಿಸಿದ್ದಾರೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿದೆ.

2,38,791 ಮಂದಿ ಶತಾಯುಷಿಗಳೂ ಮತದಾರರ ಪಟ್ಟಿಯಲ್ಲಿದ್ದಾರೆ. ಅದರ ಜೊತೆಗೆ 17 ವರ್ಷ ದಾಟಿದವರು ಮುಂಗಡವಾಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News