ಹುಟ್ಟುಹಬ್ಬಕ್ಕೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು ಬಾಲಕಿ ಮೃತ್ಯು

Update: 2024-03-31 02:37 GMT

Photo: twitter.com/WIONews

ಪಾಟಿಯಾಲಾ: ಹುಟ್ಟುಹಬ್ಬಕ್ಕಾಗಿ ಬೇಕರಿಯೊಂದರಿಂದ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ತಂಗಿ ಸೇರಿದಂತೆ ಕುಟುಂಬದ ಎಲ್ಲರೂ ಕೇಕ್ ತಿಂದು ಅಸ್ವಸ್ಥರಾಗಿದ್ದಾರೆ ಎಂದು ಮೃತ ಬಾಲಕಿಯ ಅಜ್ಜ

ಸಾವಿಗೆ ಕೆಲವೇ ಕ್ಷಣ ಮೊದಲು ಬಾಲಕಿ ಮನ್ವಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬಾಲಕಿ ಮಾರ್ಚ್ 24ರಂದು ಸಂಜೆ 7 ಗಂಟೆಯ ಸುಮಾರಿಗೆ ಕೇಕ್ ಕತ್ತರಿಸಿದ್ದು, ರಾತ್ರಿ 10 ಗಂಟೆಯ ಸುಮಾರಿಗೆ ಕುಟುಂಬದ ಎಲ್ಲರೂ ಅಸ್ವಸ್ಥರಾದರು ಎಂದು ಅಜ್ಜ ಹರ್ಬನ್ ಲಾಲ್ ಹೇಳಿದ್ದಾರೆ. ಬಾಲಕಿ ಹಾಗೂ ಆಕೆಯ ಸಹೋದರಿ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಮನ್ವಿ ವಿಪರೀತ ಬಾಯಾರಿಕೆಯಾಗುತ್ತಿದೆ ಎಂದು ನೀರು ಕೇಳುತ್ತಿದ್ದಳು. ಬಾಯಿ ಒಣಗುತ್ತಿದೆ ಎಂದು ಹೇಳಿ ನಿದ್ದೆಗೆ ಜಾರಿದಳು ಎಂದು ಅವರು ವಿವರ ನೀಡಿದ್ದಾರೆ.

ಬಾಲಕಿಯ ದೇಹಸ್ಥಿತಿ ಕ್ಷೀಣಿಸಿದ್ದರಿಂದ ಬೆಳಿಗ್ಗೆ ಆಸ್ಪತ್ರಗೆ ಕರೆದೊಯ್ಯಲಾಯಿತು. ಕೃತಕ ಉಸಿರಾಟ ವ್ಯವಸ್ಥೆ ಹಾಗೂ ಇಸಿಜಿ ವ್ಯವಸ್ಥೆ ಮಾಡಲಾಯಿತು. ಆದರೆ ಇದಾದ ಸ್ವಲ್ಪಹೊತ್ತಿನಲ್ಲಿ ಆಕೆ ಮೃತಪಟ್ಟಿರುವುದನ್ನು ವೈದ್ಯರು ಧೃಢಪಡಿಸಿದರು ಎಂದು ಹರ್ಬನ್ಲಾಲ್ ಹೇಳಿದ್ದಾರೆ.

ಕೇಕ್ ಖಾನಾದಿಂದ ಆರ್ಡರ್ ಮಾಡಲಾದ ಚಾಕಲೇಟ್ ಕೇಕ್ನಲ್ಲಿ ವಿಷಯುಕ್ತ ವಸ್ತು ಇದ್ದಿರಬೇಕು ಎಂದು ಕುಟುಂಬ ಶಂಕೆ ವ್ಯಕ್ತಪಡಿಸಿದೆ. ಬೇಕರಿ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೇಕ್ನ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News