ತೀವ್ರ ಜ್ವರ: ತಪಾಸಣೆಗೆಂದು ಮತ್ತೆ ಆಸ್ಪತ್ರೆಗೆ ತೆರಳಿದ ಏಕನಾಥ್ ಶಿಂಧೆ
Update: 2024-12-03 09:51 GMT
ಥಾಣೆ: ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಾರದೆ ಇದ್ದುದರಿಂದ, ಅವರನ್ನು ಥಾಣೆಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಏಕನಾಥ್ ಶಿಂದೆಯನ್ನು ಪರೀಕ್ಷಿಸಿದ ವೈದ್ಯರು, ಅವರ ಸಂಪೂರ್ಣ ಆರೋಗ್ಯ ತಪಾಸಣೆಗೆ ಸಲಹೆ ನೀಡಿದ್ದಾರೆ. ಏಕನಾಥ್ ಶಿಂದೆ ಕಳೆದ ವಾರದಿಂದ ಗಂಟಲು ಸೋಂಕು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ.
“ನನ್ನ ಆರೋಗ್ಯ ತುಂಬಾ ಚೆನ್ನಾಗಿದೆ” ಎಂದು ವೈದ್ಯಕೀಯ ತಪಾಸಣೆಯ ನಂತರ ಆಸ್ಪತ್ರೆಯಿಂದ ನಿರ್ಗಮಿಸುತ್ತಿದ್ದ ಏಕನಾಥ್ ಶಿಂದೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ನೂತನ ಸರಕಾರ ರಚನೆ ವೈಖರಿಯ ಬಗ್ಗೆ ಅಸಮಾಧಾನಗೊಂಡಿರುವ ಏಕನಾಥ್ ಶಿಂದೆ, ಶುಕ್ರವಾರ ಸತಾರ ಜಿಲ್ಲೆಯಲ್ಲಿನ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ ಎಂಬ ವದಂತಿಗಳು ಹರಡಿದ್ದು, ತಮ್ಮ ಸ್ವಗ್ರಾಮಕ್ಕೆ ತಲುಪಿದ ನಂತರ, ಏಕನಾಥ್ ಶಿಂದೆ ಜ್ವರಕ್ಕೆ ತುತ್ತಾಗಿದ್ದರು.